Advertisement

“ಮಕ್ಕಳು ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿದ್ದಾರೆ’

11:59 PM Dec 15, 2019 | Sriram |

ಮಹಾನಗರ: “ಇಂದಿನ ಪೀಳಿಗೆ ಶಾಸ್ತ್ರೀಯ ಸಂಗೀತವನ್ನು ಇಷ್ಟಪಡುವುದಿಲ್ಲ. ಪಾಶ್ಚಾತ್ಯ ಸಂಗೀತದತ್ತ ಅವರ ಒಲವು ಹೆಚ್ಚುತ್ತಿದೆ ಎಂಬುದಾಗಿ ಪ್ರಚಲಿತ ಕೇಳಿಬರುತ್ತಿರುವ ಅಭಿಪ್ರಾಯಗಳು, ಭಾವನೆಗಳು ಸರಿಯಲ್ಲ. ಓರ್ವ ಸಂಗೀತಗಾರನಾಗಿ, ಸಂಗೀತ ಶಿಕ್ಷಕನಾಗಿ ನಾನು ಕಂಡುಕೊಂಡಿರುವ ಸತ್ಯ ಎನೆಂದರೆ ಮಕ್ಕಳಲ್ಲಿ ಶಾಸ್ತ್ರೀಯ ಸಂಗೀತದ ಒಲವು ಹೆಚ್ಚುತ್ತಿದೆ’ ಎಂದು ಖ್ಯಾತ ಪಿಟೀಲುವಾದಕ ಕುಮರೇಶ್‌ ರಾಜಗೋಪಾಲನ್‌ ಹೇಳಿದ್ದಾರೆ.

Advertisement

ಸ್ವರಲಯ ಸಾಧನಾ ಪೌಂಡೇಶನ್‌ ಆಶ್ರಯದಲ್ಲಿ ನಗರದ ಉಜೊjàಡಿಯ ನಾರ್ದನ್‌ ಸ್ಕೈ ಸಿಟಿಯಲ್ಲಿ ಡಿ. 13ರಿಂದ 15ರ ವರೆಗೆ ಆಯೋಜಿಸಿದ್ದ ಪಿಟೀಲು ವಾದನದ ವಿಶೇಷ ನೈಪುಣ್ಯ ಶಿಬಿರದ ಸಮಾರೋಪದ ಸಂದರ್ಭ ರವಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಇತ್ತೀಚೆಗೆ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಮನೆಪಾಠ ಟ್ರೆಂಡ್‌ ಹೆಚ್ಚುತ್ತಿದೆ. ಮಕ್ಕಳು ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿದ್ದಾರೆ. ಸಂಗೀತವನ್ನು ತಮ್ಮ ಕಲಿಕೆ ವಿಷಯವಾಗಿ ಆಯ್ದುಕೊಳ್ಳುವ ಪ್ರವೃತ್ತಿ ಇದೀಗ ಯುವಜನತೆಯಲ್ಲಿ ಹೆಚ್ಚಾಗುತ್ತಿದೆ.ನಾನು ಭೇಟಿ ನೀಡುವ ಪ್ರತಿಯೊಂದು ಶಿಬಿರಗಳಲ್ಲೂ ಗಣನೀಯ ಸಂಖ್ಯೆಯಲ್ಲಿ ಮಕ್ಕಳು ಸಂಗೀತಾಭ್ಯಾಸದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ ಎಂದರು.

“ರಾಗಪ್ರವಾಹ’ದ ಸೃಷ್ಟಿ
ಸಂಗೀತಗಾರರಲ್ಲಿ ಶೋಧನೆಯ ತುಡಿತ ಹೆಚ್ಚಾದಾಗ ಅಲ್ಲಿ ಹೊಸತು ಸೃಷ್ಟಿಯಾಗುತ್ತದೆ. ನಾನು ಹಾಗೂ ಸಹೋದರ ಗಣೇಶ್‌ ಪಿಟೀಲಿನಲ್ಲಿ ರಾಗ ಪ್ರವಾಹ ಎಂಬ ಹೊಸ ಸ್ವರವನ್ನು ಸೃಷ್ಟಿಸಿದೇವು. ಇದು ಸಂಗೀತ ಪ್ರಿಯರು, ವಿದ್ವಾಂಸರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಂಗೀತ ಕ್ಷೇತ್ರ ಇದನ್ನು ಸ್ವೀಕರಿಸಿ ಅಪ್ಪಿಕೊಂಡಿದೆ.

ನಾದೋಪಾಸನೆಯಿಂದ ಸಂಗೀತಗಾರ ಸಾಧಕನಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಯಾವ ಸಂಗೀತಗಾರ ನಾದೋಪಾಸನೆಯಲ್ಲಿ ತೊಡಗುತ್ತಾನೋ ಅವನೋರ್ವ ಶ್ರೇಷ್ಠ ಸಂಗೀತಗಾರ, ಸಂಗೀತ ಶಿಕ್ಷಕ, ವಿದ್ವಾಂಸ, ಸಂಶೋಧಕನಾಗಿ ಎತ್ತರಕ್ಕೇರಲು ಸಾಧ್ಯವಾಗುತ್ತದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಸಾಮಾನ್ಯವಾಗಿ ಸಂಗೀತದಲ್ಲಿ ಸಾಹಿತ್ಯ ಭಾವ ಮತ್ತು ಸಂಗೀತ ಭಾವ ಎಂಬ ಎರಡು ಭಾಗಗಳಿರುತ್ತವೆ. ಸಾಹಿತ್ಯಭಾವದಲ್ಲಿ ಸಾಹಿತ್ಯವನ್ನು ಪ್ರಧಾನವಾಗಿಟ್ಟುಕೊಂಡರೆ ಸಂಗೀತಭಾವದಲ್ಲಿ ಸ್ವರವನ್ನೇ ಪ್ರಧಾನ ವಾಗಿಟ್ಟುಕೊಂಡು ಸಂಗೀತಗಾರ ಮುನ್ನೆಡೆ ಯುತ್ತಾನೆ. ಪಿಟೀಲು, ವೀಣೆ ಸಹಿತ ಸಂಗೀತ ಸಾಧನಾಗಳಲ್ಲಿ (ಇನ್ಸುಟ್ರಾಮೆಂಟಲ್‌) ಸ್ವರವೇ ಪ್ರಧಾನವಾಗಿರುತ್ತದೆ. ನನ್ನ ರಾಗಪ್ರವಾಹದಲ್ಲಿ ಸಂಗೀತ ಭಾವವೇ ಪ್ರಧಾನವಾಗಿದೆ.

ಸಂಗೀತ ಮೊದಲು ತನ್ನನ್ನು ಆಕರ್ಷಿಸಬೇಕು
“ಸಂಗೀತ ಮೊದಲು ತನ್ನನ್ನು ಆಕರ್ಷಿಸಬೇಕು. ಆಗ ನಾನು ಇತರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಮತವಾಗಿದೆ.ರಾಗಪ್ರವಾಹ ಸ್ವರ ಸೃಷ್ಠಿಯ ಸಂದರ್ಭದಲ್ಲೂ ಇದೇ ಪರಿಕಲ್ಪನೆಯನ್ನು ಅನ್ವಯಿಸಿಕೊಂಡಿದ್ದೇನೆ. ನನ್ನ ಪ್ರತಿಯೊಂದು ಸಂಗೀತ ಸಾಧನೆಗೂ ಮೊದಲ ವಿಮರ್ಶಕ ನಾನೆ ಆಗಿದ್ದೆ.’ ಎನ್ನುತ್ತಾರೆ ಕುಮರೇಶ್‌ ಪರಿವರ್ತನೆ ಸಹಜ “ಪ್ರತಿಯೊಂದು ಕ್ಷೇತ್ರವೂ ಖಂಡಿತವಾಗಿಯೂ ನಿಂತ ನೀರಲ್ಲ. ಅದು ನಿರಂತರ ಬದಲಾವ ಣೆಗಳನ್ನು ಕಾಣುತ್ತವೇ ಬಂದಿದೆ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಇದಕ್ಕೆ ಸಂಗೀತವೂ ಹೊರತಾಗಿಲ್ಲ. ಸಂಗೀತ ಕ್ಷೇತ್ರ ಹೊಸ ಅವಿಷ್ಕಾರಗಳನ್ನು , ಹೊಸ ಸೃಷ್ಠಿಗಳನ್ನು, ಪ್ರಯೋಗಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಬಂದಿವೆ. ಇದು ನಿರಂತರ ಪ್ರಕ್ರಿಯೆ’ ಎಂಬುದು ಕುಮರೇಶ್‌ ಅವರ ಅಭಿಮತ.

Advertisement

ಚೆನೈಮೂಲದ ಕುಮರೇಶ್‌ ರಾಜಗೋಪಾಲನ್‌ ಅವರು “ದ ಫ್ಲಿಡಿಂಗ್‌ ಮಾಂಕ್‌ ‘ಎಂದೇ ಪ್ರಸಿದ್ಧರು. ಕುಮರೇಶ್‌ ಅವರು ವಿಶ್ವದ ಯಾವುದೇ ಸಂಗೀತ ಪ್ರಕಾರವನ್ನು ಪಿಟೀಲಿನಲ್ಲಿ ಲೀಲಾಜಾಲವಾಗಿ ನುಡಿಸುವ ನೈಪುಣ್ಯ ಪಡೆದಿರುವ ಸಂಗೀತಗಾರ. ವಿಶ್ವದ ಶ್ರೇಷ್ಠ ಪಿಟೀಲುವಾದಕರ ಸಾಲಿನಲ್ಲಿರುವ ಸಹೋದರರಾದ ಗಣೇಶ್‌, ಕುಮರೇಶ್‌ ಅವರು ಪಿಟೀಲುವಾದನದಲ್ಲಿ “ಗಣೇಶ್‌ ಕುಮರೇಶ್‌’ ಎಂದೇ ಪ್ರಖ್ಯಾತರು. ಕುಮರೇಶ್‌ ಅವರು ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಪಿಟೀಲು ವಾದನ ಶಿಬಿರದಲ್ಲಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next