Advertisement

ಆ ನೆನಪಿನ ದಿನಗಳು

06:00 AM Dec 14, 2018 | Team Udayavani |

ಜೂನ್‌ ತಿಂಗಳು ಬಂತೆಂದರೆ ಮಕ್ಕಳಿಗೆ ಬೇಜಾರು. ರಜೆಯ ಸೊಬಗನ್ನು ಆನಂದಿಸಿ ಮರಳಿ ಶಾಲೆಯ ಕಡೆಗೆ ಪಯಣ ಮಾಡಬೇಕೆಂಬ ಬೇಜಾರು ಒಂದೆಡೆಯಾದರೆ, ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಖುಷಿ. ಗೆಳೆಯ-ಗೆಳತಿಯರು ಸಿಗುತ್ತಾರೆ. ಅವರಲ್ಲಿ ರಜೆಯ ಸಂತೋಷದ ಕ್ಷಣ ಹಂಚಿಕೊಳ್ಳಲು ಕಾತರ. ಹೊಸ ಕ್ಲಾಸ್‌ರೂಮ್‌, ಹೊಸ ವಿಷಯ, ಬ್ಯಾಗ್‌, ಬುಕ್ಸ್‌ , ಛತ್ರಿ ಎಲ್ಲವೂ ಹೊಸದೆಂಬ ಸಂತೋಷದಿಂದ ಶಾಲೆಗೆ ತಯಾರಾಗುತ್ತೇವೆ.

Advertisement

ನಾನು ಬೆಳ್ತಂಗಡಿ ತಾಲೂಕಿನ “ಎಳನೀರು’ ಎಂಬ ಗ್ರಾಮದಿಂದ ಕಳಸ ಎಂಬ ಸಣ್ಣ ಪಟ್ಟಣಕ್ಕೆ ಶಾಲೆಗೆ ಹೋಗಬೇಕಿತ್ತು. ಸುಮಾರು 18 ಕಿ.ಮೀ. ದೂರ. ವರುಣನ ಆರ್ಭಟದ ಮಧ್ಯೆ ಶಾಲೆಗೆ ಹೋಗುವುದೆಂದರೆ ಅರ್ಧ ಸ್ನಾನ ಮಾಡಿದ ಹಾಗೆಯೇ ಸರಿ. ಹೆಸರೇ ಹೇಳಿದ ಹಾಗೆ “ಎಳನೀರು’ ಜಲಧಾರೆಯ ಊರು. ನೇತ್ರಾವತಿ ನದಿ ಉಮಗಸ್ಥಾನ. ಅನೇಕ ಫಾಲ್ಸ್‌ ಹೊಂದಿರುವ ಪುಟ್ಟ  ಗ್ರಾಮ. ನೇತ್ರಾವತಿ ನದಿ ದಾಟಲು ಮರದ ಸೇತುವೆಯಿತ್ತು. ಅದು ಅಡಿಕೆ ಮರದಿಂದ ಮಾಡಲಾಗಿತ್ತು. ಈ ಸೇತುವೆ ದಾಟುವುದೇ ಒಂದು ಸಾಹಸದ ವಿಷಯ. ಈ ಸೇತುವೆ ದಾಟಿ ಶಾಲೆಗೆ ಹೋಗಬೇಕಿತ್ತು. ಶಾಲೆಗೆ ಹೋಗಲು ಸೋಮಾರಿತನವಾದಾಗ ಶಾಲೆಯಲ್ಲಿ ಮಾರನೇ ದಿನ ಹೇಳುವ ಕಾರಣ ಎಂದರೆ, ಮಳೆಯಿಂದ ನದಿತುಂಬಿ ಸೇತುವೆ ಮೇಲೆ ನೀರು ಬಂದಿತ್ತು, ನದಿ ದಾಟಲು ಆಗಲಿಲ್ಲ ಎಂದು. ಈ ಕಾರಣ ಹೇಳಿ ಮಳೆಗಾಲದಲ್ಲಿ ಶಾಲೆಗೆ ರಜಾ ಹಾಕಿ ಮನೆಯಲ್ಲಿ ಇರುತ್ತಿದ್ದೆವು.

ರಜೆ ಮಾಡಿ ಮನೆಯಲ್ಲಿದ್ದರೂ ಒಂದೆಡೆ ಭಯ. ಹೋಮ್‌ವರ್ಕ್‌ನ ಚಿಂತೆ, ನೋಟ್ಸ್‌ ಇನ್‌ಕಂಪ್ಲೀಟ್‌ ಆಗುತ್ತದೆ ಎಂಬ ಯೋಚನೆ. ಆದರೆ, ಶಾಲೆಗೆ ರಜೆ ಘೋಷಿಸಿದ ದಿನ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಇನ್ನೊಂದೆಡೆ ಶಾಲೆ ತಲುಪಿದ ನಂತರ ಮಳೆಯ ಕಾರಣದಿಂದ ಶಾಲೆಗೆ ರಜೆ ಎಂಬ ವಿಷಯ ಗೊತ್ತಾಗುತ್ತಿತ್ತು. ಪುನಃ ನದಿ ದಾಟಿ ಮನೆಗೆ ಹೋಗುವ ಆತುರ.

ಆ ದಿನಗಳ ನೆನಪನ್ನು ಮೆಲುಕು ಹಾಕುತ್ತಿದ್ದರೆ ಬರೆಯಲಾರದಷ್ಟು ನೆನಪುಗಳಿವೆ, Childhood days are golden days  ಅನ್ನೋ ಹಾಗೆ. ನೆನಪುಗಳು ಮಾತ್ರ ಮರುಕಳಿಸುತ್ತಿರುತ್ತವೆ.

ಪಾವನಾ ಜೈನ್‌
ಮಿಲಾಗ್ರಿಸ್‌ ಕಾಲೇಜು,ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next