Advertisement

ಮಕ್ಕಳಿಗಿನ್ನೂ ಸಿಕ್ಕಿಲ್ಲ ಶೂ-ಸಾಕ್ಸ್‌

11:18 AM Aug 20, 2019 | Suhan S |

ಅಫಜಲಪುರ: ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ-ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಎಲ್ಲೆಡೆ ಶೂ ಹಾಗೂ ಸಾಕ್ಸ್‌ ವಿತರಣೆ ಮಾಡುತ್ತಿದ್ದರೂ ತಾಲೂಕಿನ ಶಾಲೆಗಳಲ್ಲಿ ಶೂ, ಸಾಕ್ಸ್‌ ವಿತರಿಸಿಲ್ಲ.

Advertisement

ತಾಲೂಕಿನ 16 ಕ್ಲಸ್ಟರ್‌ಗಳ 273 ಸರ್ಕಾರಿ ಪ್ರಾಥಮಿಕ ಶಾಲೆ, 31 ಪ್ರೌಢಶಾಲೆ, ಆರು ಅನುದಾನಿತ ಪ್ರಾಥಮಿಕ ಶಾಲೆ, 11 ಪ್ರೌಢಶಾಲೆಗಳ ಒಟ್ಟು ಅಂದಾಜು 26 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆಲ್ಲ ಜೂನ್‌ ಅಂತ್ಯದ ವೇಳೆಗೆ ಶೂ ಮತ್ತು ಸಾಕ್ಸ್‌ ವಿತರಿಸಬೇಕಿತ್ತು. ಆದರೆ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಶೂ, ಸಾಕ್ಸ್‌ ವಿತರಣೆ ಮಾಡಿಲ್ಲ.

ಆರೋಪ: ತಾಲೂಕಿನಾದ್ಯಂತ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕಳಪೆ ಶೂ, ಸಾಕ್ಸ್‌ ವಿತರಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 1ರಿಂದ 5 ತರಗತಿ ವಿದ್ಯಾರ್ಥಿಗಳಿಗೆ 265 ರೂ. ವೆಚ್ಚದಲ್ಲಿ ಶೂ, ಸಾಕ್ಸ್‌ ಖರೀದಿಯಾಗಬೇಕು. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ವೆಚ್ಚದ ಶೂ, ಸಾಕ್ಸ್‌ ಖರೀದಿಯಾಗಬೇಕು. ಆದರೆ ಕಳೆದ ಬಾರಿ ಕಡಿಮೆ ಬೆಲೆಯಲ್ಲಿ ಖರೀದಿಸಿದ್ದರಿಂದ ವಿತರಿಸಿದ ಮೂರ್‍ನಾಲ್ಕು ತಿಂಗಳಲ್ಲಿ ಶೂ, ಸಾಕ್ಸ್‌ ಹರಿದು ಹೋಗಿದ್ದವು. ಎಂದು ಮಕ್ಕಳು ಪಾಲಕರು ಆರೋಪಿಸಿದ್ದಾರೆ.

ಮನವಿ: ಶಾಲೆಗಳು ಆರಂಭವಾಗುವ ಸಮಯದಲ್ಲೇ ಸರ್ಕಾರ ಶೂ, ಸಾಕ್ಸ್‌ ವಿತರಿಸಬೇಕಿತ್ತು. ಇಲಾಖೆ ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಪಠ್ಯ-ಪುಸ್ತಕ ಹಾಗೂ ಸಮವಸ್ತ್ರದೊಂದಿಗೆ ಶೂ, ಸಾಕ್ಸ್‌ ವಿತರಣೆ ಮಾಡಬೇಕು ಎಂದು ಮಕ್ಕಳ ಪಾಲಕರಾದ ಸದ್ದಾಮಹುಸೇನ್‌ ನಾಕೇದಾರ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next