Advertisement
ಜಿಲ್ಲೆಯಲ್ಲಿ ಕಳೆದ 8 ವರ್ಷಗಳಲ್ಲಿ ಬಾಲ್ಯ ವಿವಾಹ ನಡೆದೇ ಇಲ್ಲ. ಆದರೆ 2017ರಲ್ಲಿ ಉಡುಪಿ ತಾಲೂಕಿನ ಪೆರಂಪಳ್ಳಿಯಲ್ಲಿ 17 ವರ್ಷ 11 ತಿಂಗಳು 16 ದಿನದ ಬಾಲಕಿಗೆ ಮದುವೆ ಮಾಡಲು ಪ್ರಯತ್ನ ನಡೆದಿತ್ತಾದರೂ, ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಡಿ.ಡಿ. ಗ್ರೇಸಿ ಅವರು ಮದುವೆಯನ್ನು ತಡೆಯುವಲ್ಲಿ ಸಫಲರಾಗಿದ್ದರು. ಇದು ತಾಂತ್ರಿಕವಾಗಿ ಬಾಲ್ಯ ವಿವಾಹವೆನಿಸಿದರೂ ಉದ್ದೇಶಪೂರ್ವಕ ಬಾಲ್ಯ ವಿವಾಹವಲ್ಲ. 15 ದಿನ ಕಳೆದಿದ್ದರೆ ಈ ಪ್ರಕರಣ ಬಾಲ್ಯವಿವಾಹದ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಿತ್ತು.
Related Articles
Advertisement
ಕಾನೂನಿನ ಭೀತಿ :
ಪ್ರಸ್ತುತ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಿಗಿಯಾಗಿದ್ದು, ಅರ್ಚಕರು, ತಂದೆ-ತಾಯಿ, ಹುಡುಗನ ತಂದೆ- ತಾಯಿ, ಮದುವೆಗೆ ಬರುವ ಸಂಬಂಧಿಕರು, ಸಹಕಾರ ನೀಡಿದ ಸಂಘಟಕರ ಮೇಲೆಯೂ ಕಾನೂನಿನ ಅನ್ವಯ ಪ್ರಕರಣ ದಾಖಲಿಸಲು ಅವಕಾಶವಿದೆ. ಈ ಬಗ್ಗೆ ಸಾಮಾನ್ಯ ಅರಿವು ಜನರಲ್ಲಿ ಇರುವುದರಿಂದ ಬಾಲ್ಯವಿವಾಹ ನಡೆಯುತ್ತಿಲ್ಲ.
ಸ್ಥಳೀಯರಲ್ಲಿ ಜಾಗೃತಿ :
ಕಳೆದ ಐದಾರು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ನಡೆಸುವ ಪ್ರಯತ್ನಗಳು ವಿಫಲವಾಗಿವೆ. ಸ್ಥಳೀಯರ ಜಾಗೃತ ಮನೋಭಾವ ಮತ್ತು ಅಧಿಕಾರಿಗಳು ಮಾಹಿತಿ ದೊರೆತ ತತ್‌ಕ್ಷಣ ಕಾರ್ಯ ಪ್ರವೃತ್ತ ರಾಗುತ್ತಿದ್ದಾರೆ. ಇದರಿಂದಾಗಿ ವಿವಾಹ ಪ್ರಯತ್ನಗಳು ಕೂಡ ನಡೆಯುತ್ತಿಲ್ಲ. ಶಿಕ್ಷಣ ಇಲಾಖೆಯ ಸಹಯೋಗ ದಲ್ಲಿ 6ರಿಂದ 18 ವರ್ಷ ದೊಳ ಗಿನವರ ಪಟ್ಟಿ ತಯಾರಿಸಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಮಕ್ಕಳ ಹಾಜರಾತಿ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ.
ಹೊರ ಜಿಲ್ಲೆಯ ಕಂಟಕ:
ಹೊರ ಜಿಲ್ಲೆಯಲ್ಲಿ ಮದುವೆಯಾಗಿ ಬಂದು ಉಡುಪಿಯಲ್ಲಿ ನೆಲೆಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನ ವರು ಗರ್ಭಿಣಿಯಾದವರು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಕೊರೊನಾ ಲಾಕ್‌ಡೌನ್ ಬಳಿಕ ಸುಮಾರು 6 ಪ್ರಕರಣಗಳು ಪತ್ತೆಯಾಗಿದೆ. ಅಪ್ರಾಪ್ತ ಬಾಲಕಿ ಯರನ್ನು ರಕ್ಷಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
2019ರ ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ರಾಜ್ಯಾ ದ್ಯಂತ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಘಟನೆಗಳು ಸಂಭವಿಸಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದಕ್ಕೆ ಪ್ರಯತ್ನವೂ ನಡೆದಿಲ್ಲ. ರಾಜ್ಯಮಟ್ಟದ ಪಟ್ಟಿಯಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆಯಾಗಿ ಇದು ಗುರುತಿಸಿಕೊಂಡಿದೆ.
ಉಡುಪಿಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಳೆದ ಹಲವು ವರ್ಷಗಳಿಂದ ಶೂನ್ಯವಿದೆ. ಹೊರ ಜಿಲ್ಲೆಯವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡು ಉದ್ಯೋಗ ನಿಮಿತ್ತ ಉಡುಪಿಯಲ್ಲಿ ನೆಲೆಸುತ್ತಿದ್ದಾರೆ. ಇಂತಹ ಪ್ರಕರಣಗಳು ಅಪ್ರಾಪ್ತರು ಗರ್ಭಿಣಿಯಾಗಿ ಚಿಕಿತ್ಸೆಗೆ ದಾಖಲಾದ ಸಮಯದಲ್ಲಿ ಬೆಳಕಿಗೆ ಬರುತ್ತಿದೆ. ಅಂತಹವರನ್ನು ತತ್‌ಕ್ಷಣ ರಕ್ಷಿಸಿ, ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.–ರೋನಾಲ್ಡ್ ಫುರ್ಟಾಡೊ, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಉಡುಪಿ
-ವಿಶೇಷ ವರದಿ