ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ಇಲಾಖೆಯು ಈವರೆಗೆ 23,652 ಮೋಟಾರು ವಾಹನ (ಟ್ಯಾಕ್ಸಿ/ ಕ್ಯಾಬ್)ಗಳಲ್ಲಿ ಅಳವಡಿಸಿದ್ದ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ತೆರವುಗೊಳಿಸು ವಲ್ಲಿ ಯಶಸ್ವಿಯಾಗಿದೆ. ಮೋಟಾರು ವಾಹನ ಕಾಯ್ದೆ ಹಾಗೂ ಹೈಕೋರ್ಟ್ ಸೂಚನೆ ಮೇರೆಗೆ ಸುಮಾರು ಹತ್ತು ದಿನಗಳಿಂದ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ 23,652 ಕ್ಯಾಬ್‌ಗಳಲ್ಲಿನ ಚೈಲ್ಡ್‌ಲಾಕ್ ವ್ಯವಸ್ಥೆ ತೆರವುಗೊಳಿ ಸಿದೆ. ಈ ಪೈಕಿ ನಗರವೊಂದರಲ್ಲೇ 22,007 ವಾಹನಗಳಲ್ಲಿದ್ದ ಚೈಲ್ಡ್‌ಲಾಕ್ ನಿಷ್ಕ್ರಿàಯಗೊಳಿಸಲಾಗಿದೆ. ವಾಹನ ಅರ್ಹತಾ ಪತ್ರ/ ನವೀಕರಣ/ ರಹಾದಾರಿ ನೀಡುವಿಕೆ/ ರಹದಾರಿ ನವೀಕರಣಕ್ಕಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಬಂದಾಗ ಹಾಗೂ ವಿಶೇಷ ಕಾರ್ಯಾಚರಣೆ ವೇಳೆ ಈ ತೆರವು
ಕಾರ್ಯಾಚರಣೆ ನಡೆಸಿದೆ. ಭಾನುವಾರ (ಜ. 20) ಕೂಡ ನಗರದ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.