Advertisement
ಉಸಿರಾಟದತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.ವೈದ್ಯರು ಹಾಗೂ ಪೋಷಕರು ಮಕ್ಕಳಬಗೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಹೇಳಿದರು.
Related Articles
Advertisement
ಎಸ್.ಎಸ್. ಹೈಟೆಕ್‌ಆಸ್ಪತ್ರೆಯಲ್ಲಿ 110 ಮಕ್ಕಳು ವೈರಲ್‌ಜ್ವರದಿಂದ ದಾಖಲಾಗಿದ್ದಾರೆ. 28 ಮಕ್ಕಳುಶಂಕಿತ ಡೆಂಘೀ ಜ್ವರದಿಂದ ಬಳಲುತಿದ್ದಾರೆ.ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ.ಕೊರೊನಾದ ಮೂರನೇ ಅಲೆ ಮಕ್ಕಳಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಹೆಚ್ಚಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.ಅಗತ್ಯ ಹಾಸಿಗೆ, ವೆಂಟಿಲೆಟರ್ಸ್,ಪಾಟ್ಸ್, ಮಾನಿಟರ್ಸ್ ಸೇರಿದಂತೆಮಾನವ ಸಂಪನ್ಮೂಲಗಳನ್ನು ಸಿದ್ಧತೆಮಾಡಿಕೊಂಡಿದ್ದು, ಅವರಿಗೆ ಬೇಕಾದಎಲ್ಲಾ ತರಬೇತಿಗಳನ್ನು ನೀಡಲಾಗಿದೆ.
ಅನೇಕ ಜಾಗೃತಿ ಕಾರ್ಯಕ್ರಮಗಳನ್ನುರೂಪಿಸಲಾಗುತ್ತಿದೆ. ಬಾಪೂಜಿ ಕಾಲೇಜಿನಅಂತಿಮ ವರ್ಷದ ವಿದ್ಯಾರ್ಥಿಗಳನ್ನುಬಳಸಿಕೊಳ್ಳುತ್ತಿದ್ದೇವೆ. ಜಿಲ್ಲಾ ಚಿಗಟೇರಿಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇವಾರ್ಡ್ ನಂ 65 ಹಾಗೂ 66ಮೀಸಲಿಡಲಾಗಿದೆ. ಮಾನಿಟರ್‌ಸ್ಟ್ಯಾಂಡ್, ಮಲ್ಟಿಪ್ಯಾರಾ ಮಾನಿಟರ್,ಐಸಿಯು ಬೆಡ್, ವೆಂಟಿಲೆಟರ್ ಗಳನ್ನುಸೆ.29 ರೊಳಗಾಗಿ, ಆಕ್ಸಿಜನ್, ಐಸಿಯುಬೆಡ್‌ಗಳನ್ನು ಶನಿವಾರದೊಳಗಾಗಿತರಿಸಬೇಕು. ಇಲ್ಲದಿದ್ದರೆ ಗುತ್ತಿಗೆರದ್ದುಪಡಿಸಲಾಗುವುದು ಎಂದುಸಂಬಂಧಿತರಿಗೆ ಎಚ್ಚರಿಸಿದರು.ಜಿಲ್ಲಾಸ್ಪತ್ರೆಯಲ್ಲಿ 30-40 ಅಡಿಸ್ಥಳಾವಕಾಶದಲ್ಲಿ ಹೊಸದಾಗಿ ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.
ಎಂಬಿಬಿಎಸ್ ಅಂತಿಮ ವರ್ಷದವಿದ್ಯಾರ್ಥಿಗಳಿಗೆ ಮಕ್ಕಳ ಚಿಕಿತ್ಸೆ ಕುರಿತಂತೆತರಬೇತಿ ನೀಡಲು ಕ್ರಮ ವಹಿಸಲಾಗಿದೆಎಂದು ತಿಳಿಸಿದರು.