Advertisement
ಇನ್ನೊಂದು ವಾರದೊಳಗೆ ನನ್ನ ಹುಂಡಿ ತುಂಬುತ್ತೆ, ಅದರಲ್ಲಿರುವ ದುಡ್ಡನ್ನೆಲ್ಲಾ ಜೊತೆಗಿಟ್ಟುಕೊಂಡು ಜಾತ್ರೆಗೆ ಹೋಗಬಹುದು. ಅಂದು ಕೊಂಡಿದ್ದೆಲ್ಲಾ ಖರೀದಿಸಬಹುದು ಎಂದು ಲೆಕ್ಕಹಾಕುತ್ತಾ, ಹುಂಡಿಯನ್ನೊಮ್ಮೆ ಅಲ್ಲಾಡಿಸಿ ಎಷ್ಟಿರಬಹುದೆಂದು ಯೋಚಿಸುತ್ತಿದ್ದ ಕಾಲವೊಂದಿತ್ತು. ಇಂದಿನ ಮಕ್ಕಳಿಗೆ ಹಣದ ಮೌಲ್ಯ ತಿಳಿಯದಷ್ಟು ಪೋಷಕರು ಶ್ರೀಮಂತರು. ಹೀಗಾಗಿ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಹಣ ಖರ್ಚು-ವೆಚ್ಚದ ಪಾಠ ಹೇಳಿಕೊಡಬೇಕಿದೆ.
Related Articles
Advertisement
ಕೆಲವೊಂದು ದೊಡ್ಡ ಮಟ್ಟದ ಬ್ಯಾಂಕ್‌ಗಳು ಹತ್ತು ವರ್ಷದ ನಂತರ ಮಕ್ಕಳು ಬ್ಯಾಂಕ್‌ನಲ್ಲಿ ಸ್ವತಂತ್ರವಾಗಿ ಖಾತೆ ತೆರೆಯಲು ಅವಕಾಶವನ್ನು ನೀಡುತ್ತವೆ. ಆದರೆ ಆ ಮಕ್ಕಳ ಗುರುತು ಮತ್ತು ವಿಳಾಸ ಪ್ರಮಾಣ ಪತ್ರಕ್ಕಾಗಿ ತಾನು ಓದುತ್ತಿರುವ ಶಾಲೆಯ ಮಾಸ್ಟ್ ಹೆಡ್‌ನಲ್ಲಿ ಪ್ರಾಂಶುಪಾಲರ ಸಹಿಯಿರುವ ಖಾತೆದಾರನ ಪೂರ್ಣ ಮಾಹಿತಿಯನ್ನು ಅಪೇಕ್ಷಿಸುತ್ತವೆ.
10 ವರ್ಷದ ಒಳಗಿನ ಮಕ್ಕಳಿಗೆ ಅಕೌಂಟ್ ಮಾಡಿಸಬಯಸುವ ಪೋಷಕರು ಆಧಾರ್ ಕಾರ್ಡ್, ಪ್ಯಾನ್ ಇತ್ಯಾದಿ ಮಾಹಿತಿಯನ್ನು ನೀಡಬೇಕು. ಎಸ್‌ಬಿಐನ ಪೆಹ್ಲಿ ಉಡಾನ್, ಫೆಡರಲ್ ಬ್ಯಾಂಕ್‌ನ ಯಂಗ್ ಚಾಂಪ್ ಖಾತೆ, ಐಸಿಐಸಿಐ ಬ್ಯಾಂಕ್‌ನ ಸ್ಮಾರ್ಟ್‌ಸ್ಟಾರ್ ಸೇವಿಂಗ್ ಅಕೌಂಟ್- ಇವೆಲ್ಲಾ ಮಕ್ಕಳಿಗೆಂದೇ ಆರಂಭಿಸಲಾಗಿರುವ ಉಳಿತಾಯ ಖಾತೆ ಯೋಜನೆಗಳು.
ಡೆಬಿಟ್ ಕಾರ್ಡ್: ಪ್ರಸ್ತುತ ಮೈನರ್ ಖಾತೆಗಳಿಗೂ ಎಟಿಎಂ, ಡೆಬಿಟ್ ಕಾರ್ಡ್, ಮತ್ತು ಚೆಕ್ ಬುಕ್‌ಗಳನ್ನು ಬ್ಯಾಂಕ್‌ಗಳು ನೀಡುತ್ತವೆ. ಆದರೆ ಉಳಿತಾಯ ಖಾತೆ ಇರುವ ಮಕ್ಕಳ ಹೆಸರಿನಲ್ಲಿ ಡೆಬಿಟ್ ಕಾರ್ಡ್ ಮತ್ತು ಚೆಕ್ ಬುಕ್‌ಗಳನ್ನು ಪೋಷಕರಿಗೆ ನೋಡುತ್ತಾರೆ. ಮೆಸೆಜ್ ಅಲರ್ಟ್ ಮತ್ತು ಅಂತಜಾìಲ ಬ್ಯಾಂಕಿಂಗ್ ವ್ಯವಸ್ಥೆಯನ್ನೂ ಈ ಖಾತೆಗಳಿಗೆ ಒದಗಿಸುತ್ತಾರೆ.
ಇದರಲ್ಲಿಯೂ ಸಾಮಾನ್ಯ ಖಾತೆಗಳಂತೆ ಫಂಡ್ ಟ್ರಾನ್ಸ$#ರ್, ಡೆಬಿಟ್, ಇನ್ವೆಸ್ಟ್‌ಗಳನ್ನು ಮಾಡಬಹುದು. ಆದರೆ ಇದಕ್ಕೆ ಕೆಲವು ಮಿತಿಗಳಿವೆ. ಇದರಲ್ಲಿ ದಿನಕೆೆR 1000 ರಿಂದ 2,500 ರೂ. ಇನ್ನೂ ಕೆಲವು ಬ್ಯಾಂಕುಗಳಲ್ಲಿ 5ಸಾವಿರದವರೆಗೆ ಮಾತ್ರ ಹಣ ತೆಗೆಯಲು ಖರ್ಚು ಮಾಡಲು ಅವಕಾಶ ಇದೆ. ಅರ್ಥಿಕ ವರ್ಷದಲ್ಲಿ 50 ಸಾವಿರದಿಂದ 2ಲಕ್ಷ ರೂ.ಗೆ ಮೀರಿ ಖರ್ಚುಮಾಡಬಾರದು.
ಖಾತೆಯಲ್ಲಿ 2,500 ರೂ. ನಿಂದ 5000ದವರೆಗೆ ಹಣ ಇರಬೇಕೆಂದು ಬ್ಯಾಂಕ್‌ಗಳು ಬಯಸುತ್ತವೆ. ಈ ಹಣವನ್ನು ಖಾತೆಯನ್ನು ನಿಭಾಯಿಸಲು ಮಾತ್ರವಲ್ಲದೆ ಎಟಿಎಂ, ಬೇರೆ ಬ್ಯಾಂಕ್‌ಗಳೊಂದಿಗೆ ನಡೆಸುವ ಲೇವಾದೇವಿ, ಡೆಬಿಟ್ ಕಾರ್ಡ್, ಮೆಸೇಜ್ ಅಲರ್ಟ್, ನೆಟ್ ಬ್ಯಾಂಕಿಂಗ್ ಇತ್ಯಾದಿಗಳಿಗಾಗಿ ಮೀಸಲು ಇಡಬೇಕಾಗುತ್ತದೆ. ಕೆಲವು ಬ್ಯಾಂಕ್‌ಗಳು ತಿಂಗಳಿಗೆ 100 ಮತ್ತು ಆರು ತಿಂಗಳಿಗೆ ರೂ.500 ಚಾರ್ಚ್ ಮಾಡುವುದು ಉಂಟು.
ಇಬ್ಬರಿಗೂ ಉಳಿತಾಯ: ಮಕ್ಕಳ ಖಾತೆಯನ್ನು ತೆರೆಯುವ ಉದ್ದೇಶ ಹಣ ಉಳಿಸಲೆಂದು. ಉಳಿಸಿದ ಹಣ ಆಪತ್ಕಾಲಕ್ಕೆ ಬರಲೆಂದು. ಮಕ್ಕಳೂ ಸಹ ಪೋಷಕರನ್ನು ಅನುಸರಿಸುತ್ತಾ ಖಾತೆಯಲ್ಲಿ ಕೂಡಿಡುವ ಲೆಕ್ಕ ಕಲಿಯುತ್ತಾ ಹೋಗುತ್ತವೆ. ಪೋಷಕರು ನೀಡಿದ ಪಾಕೇಟ್ ಮನಿ, ಅಜ್ಜಿ,ತಾತ, ಚಿಕ್ಕಪ್ಪ, ದೊಡ್ಡಪ್ಪ ನೀಡುವ ಪ್ರೀತಿಯ ಹಣ… ಇವೆಲ್ಲವನ್ನೂ ಖಾತೆಯಲ್ಲಿ ಕೂಡಿಟ್ಟರೆ ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದ ಹಿಡಿಗಂಟಾಗುತ್ತದೆ.
ಬ್ಯಾಂಕ್‌ಗಳು ಆ ಹಣಕ್ಕೆ ಬಡ್ಡಿಯನ್ನೂ ಸೇರಿಸಿಡುತ್ತವೆ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಎಜುಕೇಷನ್ ಪ್ಲಾನ್‌ಗಳು, ಚಿನ್ನ ಖರೀದಿ, ವಿವಾಹ, ಆರೋಗ್ಯ, ವಿಮೆ ಮುಂತಾದ ವಿಚಾರಗಳಿಗೆ ಈಗಿನಿಂದಲೇ ವ್ಯವಸ್ಥಿತವಾಗಿ ಪ್ಲಾನ್ ಮಾಡಬಹುದು. ಈಗಲಿಂದಲೇ ಉಳಿತಾಯ ಸೂತ್ರವನ್ನು ಪಠಿಸಬಹುದು. ಮ್ಯೂಚುಯಲ್ ಫಂಡ್‌ಗಳಿಗೂ ಇನ್ವೆಸ್ಟ್ ಮಾಡಬಹುದು.
ಜಾಯಿಂಟ್ ಒಳಿತು: ಭವಿಷ್ಯದ ಲಾಂಗ್ ಟರ್ಮ್ ಗೋಲ್‌ಗಳಿಗಾಗಿ ಎಫ್ಡಿ, ಆರ್‌ಡಿ ಮತ್ತು ಪಿಪಿಎಫ್ಗಳನ್ನು ಮಕ್ಕಳ ಹೆಸರಿನಲ್ಲಿ ಮಾಡಿಸಬಹುದು. ಹೂಡಿಕೆ ಮಾಡುವ ಆಕಾಂಕ್ಷೆಯಿಂದ ಮೈನರ್ ಖಾತೆಯನ್ನು ತೆರೆಯಲಿಚ್ಛಿಸಿದರೆ ಜಾಯಿಂಟ್ ಅಕೌಂಟ್ ತೆರೆಯುವುದು ಒಳ್ಳೆಯದು. ಉಳಿತಾಯ ಖಾತೆಯಾದರೆ 18 ವರ್ಷ ತುಂಬುತ್ತಿದ್ದಂತೆ, ಮೈನರ್‌ಖಾತೆಯು ಮೇಜರ್ ಖಾತೆಯಾಗುತ್ತದೆ.
ಆಮಿಷಕ್ಕೆ ಬಲಿಯಾಗಿ ಸ್ವತಂತ್ರವಾಗಿ ದುಂದು ವೆಚ್ಚ ಮಾಡುವ ಸಾಧ್ಯತೆಗಳಿರುತ್ತದೆ. ಜಾಯಿಂಟ್ ಖಾತೆ ಇದ್ದಾಗ ದುಂದು ವೆಚ್ಚ ಮಾಡುವ ಮಕ್ಕಳ ಮೇಲೆ ಹಿಡಿತ ಸಾಧಿಸಲು ಅವಕಾಶ ಇರುತ್ತದೆ. ಹೂಡಿಕೆ ವಿಚಾರದಲ್ಲಿ ತಜ್ಞರಿಂದ ತೆರಿಗೆ ಮತ್ತು ಇನ್ನಿತರ ವಿಷಯವಾಗಿ ಚರ್ಚಿಸುವುದು ಒಳಿತು.
ಸಮೀಕ್ಷೆ ಏನು ಹೇಳುತ್ತದೆ ?: ಇಂಗ್ ವೈಶ್ಯಾ ಬ್ಯಾಂಕ್, ಆರ್ಥಿಕತೆ ವಿಷಯವಾಗಿ ಬದಲಾಗುತ್ತಿರುವ ಮಕ್ಕಳ ಪೋಷಕರ ವರ್ತನೆ ಬಗೆಗೆ 2014ರಲ್ಲಿ ಸಮೀಕ್ಷೆಯೊಂದನ್ನು ಏರ್ಪಡಿಸಿತು. ಆನ್‌ಲೈನ್ ಮುಖಾಂತರ ಭಾರತದ 4000ಕ್ಕೂ ಹೆಚ್ಚು ಪೋಷಕರೊಂದಿಗೆ ಸಂಭಾಷಿಸಿತು. ಅದರಲ್ಲಿ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರಿದ್ದರು. ಶೇ. 65 ರಷ್ಟು ಜನರು ಪ್ರತಿಕ್ರಿಯಿಸಿದರಾದರೂ ಅವರೆಲ್ಲರೂ 25 ರಿಂದ 45 ವರ್ಷ ವಯೋಮಾನದವರಾಗಿದ್ದರು.
ಮಕ್ಕಳು ಪೋಷಕರನ್ನು ಶೇ. 83 ರಷ್ಟು ಅನುಕರಣೆ ಮಾಡುತ್ತವೆ. ಅಂತೆಯೇ ಉಳಿತಾಯದ ವಿಷಯದಲ್ಲೂ ಅನುಕರಿಸುತ್ತವೆ. ಶೇ.17 ರಷ್ಟು ನಕಲಿಸುವುದಿಲ್ಲ. ತಂದೆಯಿಂದ ಮಕ್ಕಳು ಶೇ. 55ರಷ್ಟು ಖರ್ಚುಮಾಡುವುದನ್ನು ಕಲಿಯುತ್ತವೆ. ಹಾಗೆಯೇ ಶೇ. 54 ರಷ್ಟು ಉಳಿಸುವುದನ್ನು ಕಲಿಯುತ್ತವೆ. ತಾಯಿಯಿಂದ ಶೇ.45 ರಷ್ಟು ಖರ್ಚ ಮಾಡುವುದನ್ನು ಮತ್ತು ಶೇ. 46 ರಷ್ಟು ಉಳಿತಾಯವನ್ನು ರೂಢಿಸಿಕೊಳ್ಳುತ್ತವೆ.
ಪೋಷಕರು ಮಕ್ಕಳು ಓದಿನ ವಿಷಯವಾಗಿ ಶೇ.76.94 ರಷ್ಟು ಉಳಿತಾಯ ಮಾಡಲು ಪ್ರಯತ್ನಿಸುತ್ತಾರೆ. ಶೇ. 47.11 ರಷ್ಟು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಶ್ರಮಿಸುತ್ತಾರೆ. ದಿಢೀರ ಅಂತ ಎದುರಾಗುವ ತೊಂದರೆಗಳಿಗಾಗಿ ಶೇ.39.73 ರಷ್ಟು ಉಳಿಸಲು ಯತ್ನಿಸಿದರೆ, ಇನ್ನು ರಿಟೈರ್ಡ್‌ಮೆಂಟ್ ಪ್ಲಾನ್‌ಗಳಿಗಾಗಿ 31.39 ರಷ್ಟು ಸೇವ್ ಮಾಡುತ್ತಾರೆ. ಶೇ. 26. 96 ರಷ್ಟು ಮಕ್ಕಳ ಮದುವೆ ಖರ್ಚಿಗಾಗಿ ಉಳಿಸಲು ಪ್ರಯತ್ನಿಸುತ್ತಾರೆ. ಅನುಕೂಲ ಏನು?
1)ಖಾತೆ ಮಾಡಿಸಿ ಆ ಹಣಕ್ಕೆ ಸಿಗುವ ಬಡ್ಡಿ, ಇನ್ವೆಸ್ಟ್‌ಮೆಂಟ್‌ನ ಪಾಠ ಕಲಿಸಿದರೆ ಮಕ್ಕಳಿಗೆ ಹಣದ ಉಳಿತಾಯದ ಬಗ್ಗೆ ಆಸಕ್ತಿ ಹೆಚ್ಚುತ್ತದೆ.
2)ಹೂಡುವಿಕೆ ಹಣಕ್ಕಾಗಿ ಪೋಷಕರು ಎಷ್ಟು ಕಷ್ಟ ಪಡುತ್ತಾರೆ ಎಂಬುದು ಮಕ್ಕಳಿಗೆ ಸುಲಭದಲ್ಲಿ ಅರ್ಥವಾಗುತ್ತದೆ.
3)ಖರ್ಚು, ಬಡ್ಡಿ, ಹೂಡಿಕೆ ಇತ್ಯಾದಿಗಳ ಬಗ್ಗೆ ಮಕ್ಕಳು ಪಾಠ ಕಲಿತಂತಾಗುತ್ತದೆ.
ಮಕ್ಕಳಿಗೆ ಪಾಕೆಟ್ ಮನಿಯೆಂದು ನೀಡುವ ಹಣ ಅಥವಾ ಬೇರೆ ಮಾರ್ಗದಲ್ಲಿ ಬರುವ ಹಣ ಅನಗತ್ಯವಾಗಿ ಖರ್ಚಾಗುವುದು ತಪ್ಪುತ್ತದೆ.
4)ಮಕ್ಕಳ ಆರ್ಥಿಕ ವ್ಯವಹಾರವನ್ನು ಪೋಷಕರೇ ನಿಭಾಯಿಸುವುದರಿಂದ ಮುಂದೆ ಹಣದ ಪೂರ್ವ ಯೋಜನೆಯನ್ನು ನಿಭಾಯಿಸಲು ಅನುಕೂಲ
5) ಮಕ್ಕಳು 18 ವರ್ಷ ಆದ ಮೇಲೆ ಖಾತೆಯಲ್ಲಿ ಹಣವಿದ್ದರೆ ಸ್ನಾತಕೋತ್ತರ ಪದವಿ ಇತ್ಯಾದಿ ಓದಿಗೆ ಲೋನ್ ಪಡೆಯಬಹುದು.
6)ತಿಂಗಳಿಗೆ ಇಂತಿಷ್ಟು ಎಂದು ಮಕ್ಕಳ ಖಾತೆಗೆ ಹಣ ಹಾಕಿ ಪೋಷಕರು ತಮ್ಮ ತೆರಿಗೆ ಹೊರೆ ಇಳಿಸಿಕೊಳ್ಳಬಹುದು. ಇದು ಮಕ್ಕಳಿಗೂ ಸಂತೋಷದ ವಿಷಯವೂ ಹೌದು. ಜಾಗರೂಕತೆ ಅಗತ್ಯ: ಇಂದಿನ ಮಕ್ಕಳು ತಾಂತ್ರಿಕವಾಗಿ ಚುರುಕಾಗಿರುವ ಕಾರಣ ಲಾಭದ ಆಸೆಗೆ ಮೊಬೈಲ್ ಮೂಲಕ ಬರುವ ಹುಸಿ ಇನ್ವೆಸ್ಟ್‌ಮೆಂಟ್ ಮೆಸೇಜ್‌ಗಳಿಗೆ ಬಲಿಯಾಗಬಹುದು ಅದರ ಬಗ್ಗೆ ಜಾಗೃತೆ ಅಗತ್ಯ. ಅಲ್ಲದೆ ಮಕ್ಕಳಿಂದ ಅಕೌಂಟಿನ ಬಗ್ಗೆ ಮಾಹಿತಿ ಪಡೆದು ಅದನ್ನು ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ಜಾಗರೂಕತೆಯಿಂದ ಇರುವಂತೆ ಸೂಚಿಸುವುದು ಒಳಿತು. * ಅನಂತನಾಗ್ ಎನ್.