Advertisement

Chikodi; ಪಟಾಕಿ ಸಿಡಿಸುವ ವೇಳೆ ಯುವಕನ ಕೈ ನುಜ್ಜು ಗುಜ್ಜು

07:52 PM Sep 22, 2023 | Team Udayavani |

ಚಿಕ್ಕೋಡಿ: ಗಣೇಶೋತ್ಸವದಲ್ಲಿ ಪಟಾಕಿ ಸಿಡಿದು ಯುವಕನ ಹಸ್ತ ನುಜ್ಜು ಗುಜ್ಜಾಗಿರುವ ಘಟನೆ ಚಿಕ್ಕೋಡಿ ನಗರದಲ್ಲಿ ನಡೆದಿದೆ.

Advertisement

ನಗರದ ಹೊಸಪೇಠಗಲ್ಲಿಯಲ್ಲಿ ಈ ಘಟನೆ ನಡೆದಿದ್ದು. ಗುರುವಾರ ರಾತ್ರಿ ಗಣೇಶೋತ್ಸವ ವೇಳೆಯಲ್ಲಿ ಸುತ್ತಳೆ ಬಾಂಬ್ ಪಟಾಕಿ ಸಿಡಿಸುವ ವೇಳೆಯಲ್ಲಿ ಪಟಾಕಿ ಒಮ್ಮಿಂದೊಮ್ಮೇಲೆ ಕೈಯಲ್ಲಿಯೇ ಸ್ಪೋಟಗೊಂಡಿದೆ. ಇದರಿಂದ 19 ವರ್ಷದ ಓಂಕಾರ ಎಂಬ ಯುವಕನ ಕೈ ಬೆರಳುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next