ಚಿಕ್ಕಮಗಳೂರು: ಅನುದಾನ ನೀಡಿ ವರ್ಷವಾದರೂ ಕಾಮಗಾರಿ ಆರಂಭವಾಗದಿರುವುದರ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ನಡೆದಿದೆ.
ತಾಲೂಕಿನ ಶಂಕರಕೂಡಿಗೆ ಎಂಬಲ್ಲಿ ಗ್ರಾಮಸ್ಥರ ಬಹಿಷ್ಕಾರದ ಕೂಗು ಕೇಳಿ ಬಂದಿದ್ದು, ಮಲೆನಾಡಲ್ಲಿ 2ನೇ ಬಾರಿಗೆ ಈ ರೀತಿಯಾಗಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೂಗು ಕೇಳಿ ಬರುತ್ತಿದೆ.
ಕಾಂಕ್ರಿಟ್ ರಸ್ತೆಗೆ ವರ್ಷದ ಹಿಂದೆಯೇ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ ಕಾಮಗಾರಿ ಪ್ರಾರಂಭವಾಗದ ಹಿನ್ನೆಲೆ ಗ್ರಾಮದ ಧ್ವಾರ ಬಾಗಿಲಲ್ಲಿ ಮಲೆನಾಡಿಗರು ಬಹಿಷ್ಕಾರದ ಬ್ಯಾನರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಗೆ ರಸ್ತೆ ಅಗೆದು ಕಂಟ್ರಾಕ್ಟರ್ ನಾಪತ್ತೆಯಾಗಿದ್ದಾರೆ ಎಂಬಿತ್ಯಾದಿ ಆರೋಪಗಳು ಕೇಳಿ ಬರುತ್ತಿದೆ.