Advertisement
ಬಿಟ್ ಕಾಯಿನ್ ಮಾದರಿಯಲ್ಲೇ ‘ಐ ಕಾಯಿನ್’ ಹೆಸರಿನಲ್ಲಿ ಈ ವ್ಯವಹಾರ ನಡೆದಿದ್ದು, ಹೂಡಿಕೆ ಮಾಡಿದ ಹಣವನ್ನು ಮೂರು ಪಟ್ಟು ಹೆಚ್ಚಿಸಿಕೊಡುವುದಾಗಿ ನಂಬಿಸಿ ನೂರಾರು ಜನರಿಂದ ಹಣ ಪಡೆದು ಕೋಟ್ಯಂತರ ರೂ. ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
Related Articles
Advertisement
ಆದರೆ ಕಳೆದ ನಾಲ್ಕೈದು ದಿನಗಳ ಹಿಂದೆ ಈ ವ್ಯವಹಾರ ನಡೆಸುತ್ತಿರುವವರು ಪರಾರಿಯಾಗುತ್ತಾರೆ ಎನ್ನುವ ಸಂಶಯ ಬಂದ ಹಿನ್ನೆಲೆಯಲ್ಲಿ ಕೆಲವರು ತಾವು ಹೂಡಿಕೆ ಮಾಡಿದ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ. ಅವರಿಗೆ ಸಬೂಬು ಹೇಳಿ ಸಾಗಹಾಕಲಾಗಿತ್ತು. ಆದರೆ, ಕೆಲವರು ವಂಚಕಿ ಮನೆಗೆ ತೆರಳಿ ಅವರ ಕಂಪ್ಯೂಟರ್‌ನಲ್ಲಿ ತಮಗೆ ನೀಡಲಾಗಿದ್ದ ಐಡಿ ಬಗ್ಗೆ ಪರಿಶೀಲಿಸಿದ್ದಾರೆ. ಆದರೆ, ಅದರಲ್ಲಿ ಯಾವುದೇ ಮಾಹಿತಿ ಇರಲಿಲ್ಲ.
ನಂತರ ಗ್ರಾಹಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ನಗರ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರುಕ್ಷಿಂದ ಬಾನುಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರ ಗೊತ್ತಾದ ಕೂಡಲೇ ನಗರ ಠಾಣೆ ಎದುರು 50 ರಿಂದ 60ಜನರು ಜಮಾಯಿಸಿ ತಾವೂ ವಂಚನೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದು ಕಂಡುಬಂದಿತು.
ವಂಚನೆಗೊಳಗಾದ ವಿಜಯಪುರದ ಸೈಯದ್ ಮಾತನಾಡಿ, ಹೆಚ್ಚಿನ ಹಣ ಸಿಗುತ್ತದೆ ಎಂಬ ಆಸೆಯಿಂದ ತಾವೂ ಸೇರಿದಂತೆ ಕೆಲವರು, 4, 7, 10ಲಕ್ಷ ರೂ. ಹೀಗೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದೇವೆ. ಹಣ ನೀಡುವಂತೆ ಕೇಳಿದಾಗಲೆಲ್ಲ ಇಂದು, ನಾಳೆ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಇದೇ ರೀತಿ ದಾದು, ಫಾತಿಮಾ, ಸೈಯದ್, ರಿಯಾಜ್, ರಫೀಕ್ ಇನ್ನಿತರರು ಸಹ ಹಣ ಕಳೆದುಕೊಂಡಿರುವುದಾಗಿ ತಿಳಿಸಿದರು.
ಬಂಧಿತ ರುಕ್ಷಿಂದ ಬಾನುಳಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್‌ಗಳು, 105 ಗ್ರಾಂ ಬಂಗಾರದ ಒಡವೆ, 53,210ರೂ. ನಗದು, ಒಂದು ಇಕೋ ನ್ಪೋರ್ಟ್ಸ್ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು 14ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.