Advertisement

ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ‌,ಸಾವಿರಾರು ಸೀರೆಗಳು ವಶ

11:05 AM Mar 23, 2023 | Team Udayavani |

ಚಿಕ್ಕಮಗಳೂರು : ಜಿಲ್ಲಾ ಪೋಲಿಸರು ಬುಧವಾರ ಭರ್ಜರಿ ಬೇಟೆ ನಡೆಸಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ಮೌಲ್ಯದ ಚಿನ್ನ‌ ವಶಪಡಿಸಿಕೊಂಡಿದ್ದಾರೆ.

Advertisement

ಚಿಕ್ಕಮಗಳೂರು ಎಸ್ಪಿ‌ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು, ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ 30‌ ಲಕ್ಷ‌‌ ರೂ. ಬೆಲೆ ಬಾಳುವ 9 ಕೆ.ಜಿ‌. 300 ಗ್ರಾಂ ಚಿನ್ನ‌ವನ್ನು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ‌ಮಾಡಿ ಪತ್ತೆ ಹಚ್ಚಿದ್ದಾರೆ.

ನಾಲ್ಕು ಬಾಕ್ಸ್ ನಲ್ಲಿ‌ ಚಿನ್ನವನ್ನ‌ ಪಿಕಪ್ ವಾಹನದಲ್ಲಿ‌ ಇಬ್ಬರು ತರುತ್ತಿದ್ದರು. ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನ ವಶಕ್ಕೆ ಪಡೆದು ಎಸ್ಪಿ ಮಾಹಿತಿ ಸಂಗ್ರಹಿಸಿದ್ದು, ತರೀಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಗಡಿಗಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.

ಸಾವಿರಾರು ಸೀರೆಗಳು ವಶ

Advertisement

ಚಿಕ್ಕಮಗಳೂರಿನ ಜಯನಗರದಲ್ಲಿರುವ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ ಮತದಾರರಿಗೆ ಹಂಚಲು ಇಟ್ಟಿದ್ದ ಲಕ್ಷಾಂತರ ಬೆಲೆಬಾಳುವ ಸಾವಿರಾರು ಸೀರೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ತರಿಸಿದ್ದ ಲಕ್ಷಾಂತರ ಮೌಲ್ಯದ ಸೀರೆಗಳನ್ನ ವಶಕ್ಕೆ ಪಡೆಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೂರತ್ ನ ಸೀರೆ ಫ್ಯಾಕ್ಟರಿಯಿಂದ‌ ಚಂದನ್ ಕುಮಾರ್ ಜೈನ್ ಹೆಸರಿನಲ್ಲಿ ಬಂದಿದ್ದ ಸೀರೆಗಲಾಗಿದ್ದು, ಸೀರೆ ಫ್ಯಾಕ್ಟರಿಗೆ ಫೋನ್ ಮಾಡಿದರೂ ಸೂಕ್ತ ಮಾಹಿತಿ ಸಿಕ್ಕಿಲ್ಲ. ಇದುವರೆಗೂ ಪೊಲೀಸರು, ಅಧಿಕಾರಿಗಳಿಗೆ ಚಂದನ್ ಕುಮಾರ್ ಜೈನ್ ಸಂಪರ್ಕಕ್ಕೆ ಸಿಗಲಿಲ್ಲ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next