ಚಿಕ್ಕಮಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ 2018ರ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಡಿ.9 ರಂದು ನಗರದಲ್ಲಿ ನಡೆಯಲಿದ್ದು, ಕುಂಬ್ಳೆ ಶ್ರೀಧರ್‌ರಾವ್ ಸೇರಿದಂತೆ 18 ಮಂದಿ ಕಲಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|
ಎಂ.ಎ.ಹೆಗಡೆ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕುವೆಂಪು ಕಲಾಮಂದಿರದಲ್ಲಿ ಡಿ.9 ರ ಸಂಜೆ 6 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯ ಬಂಗಾರಾಚಾರಿ ಅವರಿಗೆ ನೀಡಲಾಗುತ್ತಿದೆ. ಗೌರವ ಪ್ರಶಸ್ತಿಯನ್ನು ರಾಮರಾಜೇ ಅರಸ್, ಸುಬ್ರಹ್ಮಣ್ಯಭಟ್ ಮಾಂಬಾಡಿ, ಗುಂಡ್ಮಿ ಸದಾನಂದ ಐತಾಳ್, ಎಸ್.ಪಿ. ಜಗದೀಶ್, ಕೆ.ಮೋಹನ್ ಅವರಿಗೆ ನೀಡಲಾಗುವುದು ಎಂದರು.
“ಯಕ್ಷಸಿರಿ’ ಪ್ರಶಸ್ತಿಯನ್ನು ಕುಂಬ್ಳೆ ಶ್ರೀಧರ್‌ರಾವ್, ಮೋಹನ ಬೈಪಡಿತ್ತಾಯ, ಮಣೂರು ನರಸಿಂಹ ಮಧ್ಯಸ್ಥ, ನಿತ್ಯಾನಂದ ಹೆಬ್ಟಾರ್, ಕೃಷ್ಣ ಮಾಣಿ ಅಗೇರ, ಭಾಸ್ಕರ ಜೋಷಿ ಶಿರಳಗಿ, ಎಸ್.ಪಿ. ಮುನಿಕೆಂಪಯ್ಯ, ನಾರಾಯಣಸ್ವಾಮಿ, ಡಾ| ಪಿ.ಶಾಂತರಾಮ ಪ್ರಭು, ಮುದಂಗಲ್ಲು ಆನಂದ್ ಭಟ್ ಅವರಿಗೆ ನೀಡಲಾಗುವುದು ಎಂದರು.
2018 ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಾದ ಡಾ| ಎನ್.ನಾರಾಯಣ ಶೆಟ್ಟಿ, ಡಾ| ಕಬ್ಬಿನಾಲೆ ವಸಂತಭಾರದ್ವಾಜ್, ಡಾ| ಕೆ.ಎಂ.ರಾಘವ ನಂಬಿಯಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶಿವರುದ್ರಪ್ಪ, ಸದಸ್ಯ ರಮೇಶ್ ಬೇಗಾರ್ ಹಾಜರಿದ್ದರು.