ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಶತಮಾನಕ್ಕೂ ಹಿಂದೆಯೇ ಹಿರಿಯ ಸಹಕಾರಿಗಳ ದೂರದೃಷ್ಟಿಯ ಫಲವಾಗಿ ಆರಂಭಗೊಂಡ ಸಹಕಾರ ಸಂಘಗಳು ಇಂದು ಬೃಹದಾಕಾರವಾಗಿ ಬೆಳೆದು ನಿಲ್ಲುವ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ಮುಕುಟಪ್ರಾಯವಾಗಿ ಕಂಗೊಳಿಸುತ್ತಿವೆ.
Advertisement
ಜಿಲ್ಲೆಯಲ್ಲಿ 1905ರಲ್ಲಿ ಮೊದಲ ಸಹಕಾರ ಸಂಘ ಆರಂಭವಾಗಿದ್ದು, ತರೀಕೆರೆ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ “ಆ ದಿ ಕರ್ನಾಟಕ ಕೋ ಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ಮೊದಲ ಸಹಕಾರ ಸಂಘ ಆರಂಭವಾಯಿತು. ಆ ನಂತರ ಮೂಡಿಗೆರೆ ತಾಲೂಕಿನ ಕಳಸದಲ್ಲಿ 1906ರಲ್ಲಿ ಗಜಾನನ ಸಹಕಾರ ಸಂಘ, ಅದೇ ವರ್ಷ ಕಡೂರಿನಲ್ಲಿ ಪಟ್ಟಣ ಸಹಕಾರ ಸಂಘ ಆರಂಭವಾಯಿತು.
Related Articles
Advertisement
561 ಸಹಕಾರ ಸಂಘಗಳಲ್ಲಿ 23 ಸಹಕಾರ ಸಂಘಗಳು ಸಮಾಪನೆ ಗೊಂಡಿವೆ. ಪರಿಶಿಷ್ಟ ಜಾತಿ ವರ್ಗದ 10, 134 ಮಹಿಳಾ ಸಹಕಾರ ಸಂಘಗಳು, 3 ಪರಿಶಿಷ್ಟ ಜಾತಿ, 3 ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ 5 ಹಾಗೂ 406 ಸಾಮಾನ್ಯ ಸಹಕಾರ ಸಂಘಗಳಿವೆ.
ಹಳ್ಳಿಗಳಲ್ಲೂ ಡಿಸಿಸಿ ಬ್ಯಾಂಕ್ ಶಾಖೆ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಡೆಸುತ್ತಿದ್ದು, ಪ್ರತಿ ವರ್ಷ “ಎ’ ದರ್ಜೆ ಪಡೆಯುತ್ತಿದೆ. ಡಿಸಿಸಿ ಬ್ಯಾಂಕ್ ಈಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಶಾಖೆಗಳನ್ನು ತೆರೆಯುತ್ತಿದ್ದು, ಎಲ್ಲ ಶಾಖೆಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ ಮತ್ತೂಂದು ಪ್ರಮುಖ ಸಹಕಾರ ಸಂಸ್ಥೆ ಎಂದರೆ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್. ಈ ಬ್ಯಾಂಕ್ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ನಗರದಲ್ಲಿ ಮುಖ್ಯ ಕಚೇರಿ ಹಾಗೂ ಶಾಖೆ ಇದ್ದರೆ, ಕಡೂರಿನಲ್ಲಿ ಮತ್ತೂಂದು ಶಾಖೆ ತೆರೆಯಲಾಗಿದೆ. ಮಹಿಳಾ ಸಹಕಾರ ಬ್ಯಾಂಕ್ ಜಿಲ್ಲೆಯ ಹೊರಗೂ ತನ್ನ ಶಾಖೆ ತೆರೆದಿದ್ದು, ಶಿವಮೊಗ್ಗದಲ್ಲೂ ಬ್ಯಾಂಕ್ ಶಾಖೆ ಕಾರ್ಯ ನಿರ್ವಹಿಸುತ್ತಿದೆ.