Advertisement

ಲೋಕ ಕಲ್ಯಾಣಾರ್ಥ ಅತಿರುದ್ರ ಯಾಗಕ್ಕೆ ಚಾಲನೆ

05:34 PM Oct 12, 2019 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಅತಿವೃಷ್ಟಿ ತಡೆಗೆ ಮತ್ತು ಲೋಕ ಕಲ್ಯಾಣಾರ್ಥವಾಗಿ ಶ್ರೀಗುರುದತ್ತ ಚೈತನ್ಯ ಷೋಡಶಿ ಸೇವಾಶ್ರಮದಲ್ಲಿ ಅತಿರುದ್ರ ಪುರಶ್ಚರಣೆ ಮಾಡಿದ 25 ಗುರು ಭಕ್ತರಿಂದ ಹನ್ನೊಂದು ದಿನಗಳ ಅತಿರುದ್ರ ಯಾಗಕ್ಕೆ ಚಾಲನೆ ದೊರೆಯಿತು.

Advertisement

ತಾಲೂಕಿನ ಮಳಲೂರು ಸಮೀಪದ ಶ್ರೀಗುರುದತ್ತ ಚೈತನ್ಯ ಷೋಡಶಿ ದತ್ತಾಶ್ರಮದ ಆವರಣದಲ್ಲಿ ಅವಧೂತರಾದ ಅಶೋಕ ಗಣಪತಿ ಶರ್ಮ ನೇತೃತ್ವದಲ್ಲಿ ಮುಂಜಾನೆ 5.30 ರಿಂದ ಆರಂಭವಾದ ಅತಿರುದ್ರ ಯಾಗದ ಪಾರಾಯಣದಲ್ಲಿ 25ಗುರು ಭಕ್ತರು ಪಾಲ್ಗೊಂಡಿದ್ದರು.

ಹನ್ನೊಂದು ದಿನಗಳ ಕಾಲ ಬೆಳಗ್ಗೆ 5.30 ರಿಂದ 8.30ರ ತನಕ ಯಾಗ ನಡೆಯಲಿದ್ದು, ಗುರುಬಂಧುಗಳು ಪಾಲ್ಗೊಳ್ಳಲಿದ್ದಾರೆ. ಅ.20 ರಂದು ಮಧ್ಯಾಹ್ನ ಯಾಗದ ಮಹಾ ಪೂರ್ಣಾಹುತಿ ನಡೆಯಲಿದ್ದು, ನೂರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಅಶೋಕ ಗಣಪತಿ ಶರ್ಮ ಮಾತನಾಡಿ, ನಗರದ ಬಸವನಹಳ್ಳಿ ಶಂಕರಮಠ, ಸಖರಾಯಪಟ್ಟಣ, ಕಳಾಸಾಪುರಗಳಲ್ಲಿ ಗುರುಬಂಧುಗಳು ಸೇರಿ ನಾಲ್ಕೂವರೆ ತಿಂಗಳು ಪಾರಾಯಣ ಮಾಡಿದ ನಂತರ ಆಶ್ರಮದಲ್ಲಿ ಅತಿರುದ್ರಯಾಗದ ಹೋಮ, ಹವನ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದೇಶದಲ್ಲಾಗುತ್ತಿರುವ ಅತಿವೃಷ್ಟಿಗೆ ಬಹಳಷ್ಟು ಮಂದಿ ಸಂತ್ರಸ್ತರ ಜೀವನ ಅಯೋಮಯವಾಗಿದೆ.

ಮಹಾರುದ್ರ ಶಾಂತನಾಗಿ ಗಂಗೆಯನ್ನು ಸಂಪೂರ್ಣ ಸಂತೋಷಗೊಳಿಸಿ, ದೇಶಕ್ಕೆ ಒಳಿತು ಮಾಡುವಂತಾಗಲಿ. ಸಂತ್ರಸ್ತರಿಗೆ ಉತ್ತಮ ಜೀವನ ಪ್ರಾಪ್ತವಾಗಲಿ ಎಂದು ಸಂಕಲ್ಪಿಸಿ ಮತ್ತು ಲೋಕಕಲ್ಯಾಣಾರ್ಥವಾಗಿ ಈ ಯಾಗದ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಪೂರ್ಣಾಹುತಿ ದಿನದಂದು ಅನ್ನಸಂತರ್ಪಣೆ ನಡೆಯಲಿದೆ. ನಿತ್ಯ 133 ಆವರ್ತಿಯಿಂದ ಆಗುವ ಈ ಅತಿರುದ್ರ ಯಾಗದಲ್ಲಿ 11 ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ರುದ್ರಮಂತ್ರಗಳ ಸ್ವಾಹಾಕಾರಗಳು ಬರುತ್ತವೆ. ಚಿಕ್ಕಮಗಳೂರು, ಕಳಸಾಪುರ, ಸಖರಾಯಪಟ್ಟಣದ ಗುರುಬಂಧುಗಳು ನಿತ್ಯ ಆಗಮಿಸಿ ಯಾಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಗೋಪಿನಾಥ್‌ ಪಾರಾಯಣ ನಡೆಸಿದರು. ಸಚ್ಚಿದಾನಂದ, ಕಳಸಾಪುರದ ಕಿಟ್ಟಿ, ಅಕ್ಷಯ ಶರ್ಮ, ರಾಮಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಂತರ ಶ್ರೀಗುರು ದತ್ತಾತ್ರೇಯರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next