ಚಿಕ್ಕಮಗಳೂರು: ಆಲೂಗಡ್ಡೆ ಬೀಜ ನೆಲದಲ್ಲಿ ಕರಗಿದ ಕಾರಣದಿಂದ ಮನನೊಂದು ರೈತನೋರ್ವ ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ.
Advertisement
ಹಾಸನದ ಆಲೂಗಡ್ಡೆ ಮಂಡಿಯಿಂದ ಬೀಜ ತಂದಿದ್ದರು. 5 ದಿನಕ್ಕೆ ಬೆಳೆಯುತ್ತೆ ಎಂದು ಹಾಸನದ ಆಲೂಗಡ್ಡೆ ಮಂಡಿಯಲ್ಲಿ ಹೇಳಲಾಗಿತ್ತು. ಹೀಗಾಗಿ 60-70 ರೈತರು ಮೂರು ಲಾರಿಯಲ್ಲಿ ತಂದಿದ್ದರು.
15 ದಿನವಾದರೂ ಬೆಳೆ ಬಾರದ ಕಂಡು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. 10 ಎಕರೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಇದೀಗ ಆಲೂಗಡ್ಡೆ ಮಂಡಿ ವಿರುದ್ಧ ಕಿಡಿ ಕಾರಿದ್ದಾರೆ.