Advertisement
ಅಖೀಲ ಭಾರತ ಸಂತ ಸಮಿತಿ ಅಧ್ಯಕ್ಷ ಮಂಗಳೂರಿನ ಓಂ ಶ್ರೀಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ,ಜೈನ ಮುನಿ ಹತ್ಯೆ ಪ್ರಕರಣ ಹಿಂದು ಸನಾತನ ಧರ್ಮಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದು ಓರ್ವನಿಂದ ಆಗಿರುವ
ಘಟನೆ ಅಲ್ಲ. ಇದರ ಹಿಂದೆ ದೊಡ್ಡ ಕೈವಾಡ ಇರುವ ಶಂಕೆ ಇದೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು
ಆಗ್ರಹಿಸಿದರು.
ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಅಖಿಲ ಭಾರತ ಸಂತ ಸಮಿತಿಯಿಂದ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಈ ಹಿಂದೆ ಮಹಾರಾಷ್ಟ್ರದಲ್ಲೂ ಒಬ್ಬ ಸನ್ಯಾಸಿಯನ್ನು ಹೊಡೆದು ಹತ್ಯೆ ಮಾಡಲಾಗಿತ್ತು. ಅಲ್ಲಿ ಅಂದು ಇದ್ದದ್ದು ಇದೇ ಸರ್ಕಾರ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಸ್ವಾಮೀಜಿ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಮಾತ್ರ ಏಕೆ ಇಂತಹ ಘಟನೆಗಳು ಆಗುತ್ತವೆ. ಸ್ವಾಮೀಜಿ ಹತ್ಯೆ ಬಳಿಕ ನಿರಂತರವಾಗಿ 7 ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ. ಸರ್ಕಾರ
ಅಲ್ಪಸಂಖ್ಯಾತರ ಒಲೆ„ಸುವ ನಿಟ್ಟಿನಲ್ಲಿ ಬಹುಸಂಖ್ಯಾತರ ಕಡೆಗಣನೆ ಮಾಡಲು ಹೋಗಬಾರದು ಎಂದರು.
Related Articles
ಸಂತರು ಹೇಗೆ ಮುಂದೆ ಬರಬೇಕು. ಸಂಜೆ 6 ಗಂಟೆಯ ಬಳಿಕ ಯಾವ ಸಂತರೂ ಹೊರ ಬೀಳದಂತಹ ಪರಿಸ್ಥಿತಿ ಕರ್ನಾಟಕದಲ್ಲಿ
ನಿರ್ಮಾಣ ಆಗಿದೆ. ಅದಕ್ಕೆ ಪ್ರಥಮವಾಗಿ ನಮ್ಮ ಜೈನ ಮುನಿಗಳು ಬಲಿ ಆಗಿದ್ದಾರೆ.
Advertisement
ಬರಿ ಹಣದ ವಿಚಾರಕ್ಕೆ ಇಷ್ಟೊಂದು ಭೀಕರ ಹತ್ಯೆ ಆಗಿದೆ ಎಂದರೆ ನಂಬಲು ಸಾಧ್ಯವಿಲ್ಲ. ಆಗಸ್ಟ್ 31 ರೊಳಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡಲು ನಾವು ಸಿದ್ದರಾಗುತ್ತೇವೆ ಎಂದ ಅವರು, ಸನಾತನಸಂಸ್ಕೃತಿಯಲ್ಲಿ ಮುಂದಿರುವವರನ್ನು ಹತ್ಯೆ ಮಾಡಲು ಆ್ಯಂಟಿ ನ್ಯಾಶನಲ್ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ.
ಇದು ಕರ್ನಾಟದಲ್ಲಿ ಜಾಸ್ತಿಯಾಗಿದೆ ಎಂದರು. ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಸಾಯಿ ಈಶ್ವರ ಗುರೂಜಿ, ಸಂಘಟನಾ ಕಾರ್ಯದರ್ಶಿ
ಪರಮಾತ್ಮಜೀ ಮಹಾರಾಜ ಇದ್ದರು.