Advertisement

ಚಿಕ್ಕೋಡಿ:ಕೇಂದ್ರದ ಸಾಧನೆ ಮನೆ ಮನೆಗೆ ತಲುಪಿಸಿ: ಅಣ್ಣಾಸಾಹೇಬ ಜೊಲ್ಲೆ

05:02 PM Jun 08, 2023 | Team Udayavani |

ಚಿಕ್ಕೋಡಿ: ದೇಶ ಮತ್ತು ಜನರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Advertisement

ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಯಡೂರ ಗ್ರಾಮದ ಗಡಿಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಂಬತ್ತು ವರ್ಷಗಳನ್ನು ಪೂರೈಸಿದೆ. ಈ ಅವ ಧಿಯಲ್ಲಿ ದೇಶ ಮತ್ತು ಅದರ ಜನರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ 9 ವರ್ಷಗಳಿಂದ ಉಚಿತವಾಗಿ ಆಹಾರ ಧಾನ್ಯಗಳ ವಿತರಣೆ, ಕೊಟ್ಯಾಂತರ ಪ್ರಮಾಣದಲ್ಲಿ ಮನೆ, ಶೌಚಾಲಯಗಳ ನಿರ್ಮಾಣ, ಜಲಜೀವನ ಮಿಷನ್‌ ಮುಖಾಂತರ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಉಜ್ವಲ ಯೋಜನೆಯ ಮುಖಾಂತ ಗ್ಯಾಸ್‌ ಸಿಲಿಂಡರ್‌ಗಳ ವಿತರಣೆ, ಹೆಣ್ಣುಮಕ್ಕಳಿಗೆ ಸೈನ್ಯ ಸೇರ್ಪಡೆ ಅವಕಾಶ, ಮುದ್ರಾ ಯೋಜನೆ, ಕಿಸಾನ್‌ ಸಮ್ಮಾನ, ಮೆಡಿಕಲ್‌ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ.

ಇಂತಹ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ| ರಾಜೇಶ ನೆರ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಆಡಳಿತ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಪ್ರತಿ ಪ್ರತಿ ಮನೆಮನೆಗೆ ತಲುಪಿವೆ. ಕಾಂಗ್ರೆಸ್‌ ನ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

Advertisement

ಮಂಡಲ ಅಧ್ಯಕ್ಷ ಸಂಜಯ ಪಾಟೀಲ, ಗ್ರಾ.ಪಂ ಸದಸ್ಯ ಅಜಯ ಸೂರ್ಯವಂಶಿ, ಗ್ರಾ.ಪಂ ಮಾಜಿ ಅಧ್ಯಕ್ಷ ಅಮರ ಬೋರಗಾಂವೆ ಮಾತನಾಡಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಗ್ರಾ.ಪಂ ಅಧ್ಯಕ್ಷ ಶ್ರೀದೇವಿ ವರಾಳೆ, ಉಪಾಧ್ಯಕ್ಷ ರಾಹುಲ ದೇಸಾಯಿ, ವಿಕ್ರಾಂತ ದೇಸಾಯಿ, ವಿನಾಯಕ ಚಿಕೋರ್ಡೆ, ಸತೀಶ ಪುಠಾಣಿ, ನವನಾಥ ಚವಾನ, ಸಂತೋಷ ಜೋಶಿ, ಮನೋಜ ಕಿಚಡೆ, ಮಹಾವೀರ ಮಂಗಸೂಳಿ, ಚಿದಾನಂದ ಕೋಳಿ, ಅಪ್ಪಾಸಾಹೇಬ ವನೇರೆ, ದೀಪಕ ಮಾನೆ, ಸನತಕುಮಾರ ಪಾಟೀಲ, ಶಂಕರ ಪವಾರ, ಅಜೀತ ಚಿಗರೆ,ದಿಲೀಪ ಪವಾರ, ಸಂಜು ನಾಂದ್ರೆ, ಜಯರಾಮ ಕಾನಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next