ತಾಂಬಾ: ಸತತ ಪರಿಶ್ರಮ ಪಟ್ಟರೆ ಪ್ರತಿಫಲ ನಿಶ್ಚಿತ ಎಂಬುದಕ್ಕೆ ಚಿಕ್ಕರೂಗಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿದರ್ಶನವಾಗಿದೆ.
ಚಿಕ್ಕರೋಗಿ ಗ್ರಾಮದ ಲಕ್ಷ್ಮೀ ಉಡಗಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 98.56 ಅಂಕ ಪಡೆಯುವ ಮೂಲಕ ಗ್ರಾಮದ ಸರಕಾರಿ ಫೌಢಶಾಲೆಗೆ ಪ್ರಥಮ ಸ್ಧಾನಗಳಿಸಿ ಸಾಧನೆ ಮೆರೆದು ಮಾದರಿಯಾಗಿದ್ದಾಳೆ.
ಕೃಷಿಕನ ಮಗಳು: 3 ಎಕರೆ ಜಮೀನು ಹೊಂದಿರುವ ಗುರಣ್ಣ-ಸಾವಿತ್ರಿ ದಂಪತಿ ಮೊದಲ ಮಗಳಾಗಿರುವ ಲಕ್ಷ್ಮೀ ತಾಯಿಯೊಂದಿಗೆ ರಜಾ ದಿನಗಳಲ್ಲಿ ಜಮೀನಿಗೆ ತೆರಳಿ ಕಸ ತಗೆಯುವದು, ಹತ್ತಿ ಬಿಡುಸುವುದು ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು.
ಲಕ್ಷ್ಮೀ ತಂದೆ ತಾಯಿ ಇಬ್ಬರು ಅನಕ್ಷರಸ್ಧರು. ಶಾಲೆ ಮುಖವನ್ನೆ ನೋಡಿಲ್ಲ. ಆದರೂ ತಮ್ಮ ಮಗಳು ಹಾಗೂ ಮಗನಿಗೆ ಶಾಲೆ ಕಲಿಸಲು ಕಷ್ಟಪಡುತ್ತಿದ್ದಾರೆ. ಹೆತ್ರವರ ಆಶಯದಂತೆ ಲಕ್ಷ್ಮೀ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 616 ಅಂಕಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
ಶಾಲೆಯಲ್ಲಿ ಶಿಕ್ಕಕರು ಹೇಳಿದ ಪಾಠದ ಹೊರತಾಗಿ ಟ್ಯೂಷನ್ ವೆಕೇಷನ್‌ಗೆ ಹೋಗಿಲ್ಲ. ಈ ಹಳ್ಳಿ ಪ್ರತಿಭೆ ಮನೆಯಲ್ಲಿಯೇ ದಿನದ ಹಲವು ಗಂಟೆಗಳ ಕಾಲ ಅಭ್ಯಾಸ ಮಾಡಿ ನಗರದ ವಿದ್ಯಾರ್ಥಿಗಳನ್ನು ನಾಚಿಸುವಂತೆ ಅಂಕ ಗಳಿಸಿ ಇತರರು ಹುಬ್ಬೇರಿಸುವಂತೆ ಮಾಡಿದ್ದಾಳೆ.
ಸದಾ ಓದಿನತ್ತ ಹೆಚ್ಚು ಗಮನ ಹರಿಸುತ್ತಿದ ಲಕ್ಷ್ಮೀ ಶಿಕ್ಷಕರೊಂದಿಗೆ ಕಠಿಣ ವಿಷಯಗಳ ಚರ್ಚೆ ಮಾಡಿ ಅರಿತುಕೊಳ್ಳುತ್ತಿದ್ದಳು. ಹೆಚ್ಚು ಅಂಕ ಗಳಿಸುತ್ತಾಳೆ ಎಂಬ ಭರವಸೆಯನ್ನು ಉಳಿಸಿಕೊಂಡಿದ್ದಾಳೆ.
•ಜೆ.ಎಸ್. ಸೂಡ್ಡಗಿ, ಮುಖ್ಯಗುರು
ನನ್ನ ಮಗಳು ಶಾಲೆಗೆ ಪ್ರಥಮ ಸ್ಥಾನ ಪಡೆದ ವಿಷಯ ಕೇಳಿ ತುಂಬಾ ಸಂತೋಷವಾಗಿದೆ. ಅವಳು ಎಲ್ಲಿ ತನಕ ಓದುತ್ತಾಳೆಯೋ ಅಲ್ಲಿವರೆಗೆ ಓದಿಸುವ ಹಂಬಲವಿದೆ.
•ಗುರಣ್ಣ ಉಡಗಿ, ಲಕ್ಷ್ಮೀ ತಂದೆ