ಚಿಕ್ಕನಾಯಕನಹಳ್ಳಿ: ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಕಾಂಗ್ರೆಸ್‌ಗೆ ಭದ್ರವಾದ ನೆಲೆ ಇಲ್ಲದಂತಾಗಿದೆ. ಸಾಸಲು ಸತೀಶ್ ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟನೆ ಮಾಡಿದ್ದರೂ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಸಂಘಟನೆ ಕೈಬಿಟ್ಟಿದ್ದು ಗೌಪ್ಯವಾಗಿಲ್ಲ. ತಾಲೂಕಿನಲ್ಲಿ ಕಾಂಗ್ರೆಸ್ ಸಾರಥಿಯಾಗಲು ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ ಕಸರತ್ತು ಮಾಡುತ್ತಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಆಪ್ತರೊಂದಿಗೆ ಚರ್ಚಿಸಿರುವುದು ತಿಳಿದು ಬಂದಿದೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1985ರಲ್ಲಿಬಿ.ಲಕ್ಕಪ್ಪ ಕಾಂಗ್ರೆಸ್‌ನಿಂದ ಎಂಎಲ್‌ಎ ಅಗಿದ್ದು ಬಿಟ್ಟರೆ ಇದುವರೆಗೂ ಕಾಂಗ್ರೆಸ್ ತಾಲೂಕಿನಲ್ಲಿ ನೆಲೆ ಕಂಡಿಲ್ಲ. ವಿಧಾನಸಭಾಚುನಾವಣೆಗೆ ಒಂದು ವರ್ಷ ಇರುವಾಗಲೇ ತಾಲೂಕಿನಹೊಯ್ಸಳಕಟ್ಟೆ ಸಮೀಪದಲ್ಲಿನ ನೂಲೆನೂರು ಗ್ರಾಮದ ವೈದ್ಯಹಾಗೂ ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ ಕಾಂಗ್ರೆಸ್ ಟಿಕೆಟ್‌ಗೆ ಆಕಾಂಕ್ಷಿಯಾಗಿದ್ದು, ಕ್ಷೇತ್ರದಲ್ಲಿ ಸಂಘಟನೆಆರಂಭಿಸಿದ್ದಾರೆ. ಒಕ್ಕಲಿಗ ಸಮುದಾಯದ ಮುಖಂಡರಾದಪರಮೇಶ್ವರಪ್ಪ, ಮೊದಲು ತನ್ನ ಸಮುದಾಯ ವಿಶ್ವಾಸ ಪಡೆಯಲು ಒಕ್ಕಲಿಗ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
40 ವರ್ಷದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಮರಿಚಿಕೆ: ಕಾಂಗ್ರೆಸ್ ಪಕ್ಷದಿಂದ ಬಿ.ಲಕ್ಕಪ್ಪ ವಿಧಾನಸಭಾ ಸದಸ್ಯರಾಗಿದ್ದು ಬಿಟ್ಟರೆ 2018ರ ಚುನಾವಣೆಯಲ್ಲಿ ಮಾಜಿ ಸಚಿವಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಸುಮಾರು40 ಸಾವಿರ ಮತಗಳನ್ನು ಪಡೆದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆಠೇವಣಿ ಸಿಕ್ಕಿಲ್ಲ. ಸಾಸಲು ಸತೀಶ್ ಸುಮಾರು 8 ವರ್ಷದಿಂದಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದರೂ ಟಿಕೆಟ್‌ಕೈತಪ್ಪಿದ ಹಿನ್ನಲೆಯಲ್ಲಿ ನಿರಾಸೆಯಾಗಿ ಪ್ರಸ್ತುತ ಶಿರಾ ಕ್ಷೇತ್ರದಕಾಂಗ್ರೆಸ್ ಟಿಕೆಟ್‌ಗೆ ಆಕಾಂಕ್ಷಿಯಾಗಿದ್ದಾರೆ. ಆದ್ದರಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಆಕಾಂಕ್ಷಿಪೈಪೋಟಿ ಕಡಿಮೆಯಾಗಿ ಕಂಡುಬಂದಿದ್ದು, ಈ ಅವಕಾಶವನ್ನುಸದ್ಬಳಕೆ ಮಾಡಿಕೊಳ್ಳಲು ಡಾ. ಪರಮೇಶ್ವರಪ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಡಿಸಿಎಂ ಭೇಟಿ ಮಾಡಿದ ಪರಮೇಶ್ವರಪ್ಪ: ತಾಲೂಕಿನಲ್ಲಿ ನೀರಾವರಿ ಹೋರಾಟದಲ್ಲಿ ಇವರ ಪಾಲಿದ್ದು, ಕೆಲವೆಡೆ ಇವರಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಿದ್ದು, 2023ರವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲಆಕಾಂಕ್ಷಿಯಾಗಿದ್ದಾರೆ. ಕಳೆದ ಭಾನುವಾರ ಮಾಜಿಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಮಾಡಿದ್ದು, ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಮನವಿ ಸಲ್ಲಿಸಿದ್ದಾರೆಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಚುನಾವಣೆಒಂದು ವರ್ಷವಿರುವಾಗಲೇ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿರುವುದು ಸುಳ್ಳಲ್ಲ.
ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿಡಿಸಿಎಂ ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಸಂಘಟನೆಗೆ ಮುಂದಾಗಿದ್ದು,ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ನನ್ನ ಗುರಿಯಾಗಿದೆ.
– ಡಾ.ಪರಮೇಶ್ವರಪ್ಪ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
ಪಕ್ಷ ಸಂಘಟನೆಗೆ ಡಾ.ಪರಮೇಶ್ವರಪ್ಪ ಕಾರ್ಯಪ್ರವೃತ್ತರಾಗಿದ್ದು, ತಾಲೂಕಿನಲ್ಲಿ ಪಕ್ಷ ಸಂಘಟನೆಯೇ ನಮ್ಮ ಉದ್ದೇಶವಾಗಿದೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕಾರ್ಯಕರ್ತರೆಲ್ಲ ಕೆಲಸ ಮಾಡುತ್ತಾರೆ.
– ಕೆಜಿ ಕೃಷ್ಣೇಗೌಡ, ಕಾಂಗ್ರೆಸ್ ವಕ್ತಾರ, ಚಿ.ನಾ.ಹಳ್ಳಿ
– ಚೇತನ್