Advertisement

ಅರ್ಹರಿಗೆ ಸಹಾಯಧನ ತಲುಪಿಸಿ

10:36 PM Jun 10, 2021 | Team Udayavani |

ಚಿಕ್ಕಮಗಳೂರು: ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಘೋಷಣೆ ಮಾಡಿದ್ದು, ಅರ್ಹರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಧಿಕಾರಿ ಕೆ.ಎನ್‌.ರಮೇಶ್‌ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳಿಗೆ ಸೂಚಿಸಿದರು. ಬುಧವಾರ ನಗರದ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ #ರೆನ್ಸ್‌ ಮೂಲಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿ  ಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದರು.  ಮಡಿವಾಳ, ಟೈಲರ್‌, ಹಮಾಲಿ, ಚಿಂದಿ ಆಯುವರು, ಕಟ್ಟಡ ಕಾರ್ಮಿಕರು, ಕುಂಬಾರರು, ಅಕ್ಕಸಾಲಿಗರಿಗೆ ಸರ್ಕಾರ ಸಹಾಯಧನ ಬಿಡುಗಡೆ ಮಾಡಿದ್ದು, ಅರ್ಹರು ಕಾರ್ಮಿಕ ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

Advertisement

ಡಾ|ಬಿ.ಆರ್‌.ಅಂಬೇಡ್ಕರ್‌ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ನೋಂದಣಿಯಾದ 2,665 ಕಾರ್ಮಿಕರು ಮತ್ತು 2020ನೇ ಸಾಲಿನಲ್ಲಿ ಕೋವಿಡ್‌ ಪರಿಹಾರ ಧನಕ್ಕಾಗಿ ನೋಂದಣಿಯಾದ 1,408 ûೌರಿಕರು ಮತ್ತು ಮಡಿವಾಳ ಫಲಾನುಭವಿಗಳು ಪುನಃಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಇವರನ್ನು ಹೊರತುಪಡಿಸಿ ಉಳಿದ ಫಲಾನುಭವಿಗಳು ಕಾರ್ಮಿಕ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಅರಿವು ಮೂಡಿಸಬೇಕೆಂದು ಹೇಳಿದರು.

ಕಾರ್ಮಿಕರು ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಫೋಟೋ, ವಿಳಾಸ ದೃಢೀಕರಣ ಪತ್ರ, ಜನ್ಮ ದಿನಾಂಕ, ಆಧಾರ್‌ ಕಾರ್ಡ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆ ದಾಖಲೆ, ಆಧಾರ್‌ ಕಾರ್ಡ್‌, ಉದ್ಯೋಗ ಪ್ರಮಾಣ ಪತ್ರ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಬೇಕೆಂದು ತಿಳಿಸಿದರು.

ಉದ್ಯೋಗ ದೃಢೀಕರಣ ಪತ್ರದ ನಮೂನೆ ಸೇವಾಸಿಂಧು ಪೋರ್ಟಲ್‌ನಲ್ಲಿ ಲಭ್ಯವಿದ್ದು, ಉದ್ಯೋಗ ಪ್ರಮಾಣಪತ್ರವನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದರು. ಬೇರೆ ರಾಜ್ಯಗಳಿಂದ ಬಂದು ನಮ್ಮ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಪರಿಹಾರದ ಧನ ಪಡೆದುಕೊಳ್ಳಲು ಅವಕಾಶವಿದೆ. 18ರಿಂದ 65ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಅಸಂಘಟಿತ ಕಾರ್ಮಿಕರು ಅರ್ಜಿ ಹಾಕುವ ಮೂಲಕ ಸರ್ಕಾರದ ಪರಿಹಾರ ಧನವನ್ನು ಪಡೆಯುವಂತೆ ಹಾಗೂ ತಾಲೂಕು ಮಟ್ಟದ ಅ ಧಿಕಾರಿಗಳು ಅವಶ್ಯಕವಾದ ಪೂರಕ ದಾಖಲೆಗಳನ್ನು ಪರಿಶೀಲಿಸಿ ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಸರಳೀಕರಣಗೊಳಿಸುವ ಮೂಲಕ ಪರಿಹಾರ ಧನ ಪಡೆಯುವಂತೆ ಪ್ರೇರೇಪಿಸಬೇಕು.

Advertisement

ಜನರಿಂದ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಖಾರಿ ಎಸ್‌.ಪೂವಿತ, ತಹಶೀಲ್ದಾರ್‌ ಡಾ|ಕೆ.ಜೆ.ಕಾಂತರಾಜ್‌, ತಾಲೂಕು ಮಟ್ಟದ ಅ ಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next