Advertisement
ಶನಿವಾರ ನಗರದಲ್ಲಿ ಸಮಾವೇಶಗೊಂಡ ರೈತ ಮುಖಂಡರು ಗಾಂ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹುತಾತ್ಮರದಿನಾಚರಣೆ ಅಂಗವಾಗಿ ಒಂದು ನಿಮಿಷ ಹುತಾತ್ಮರಿಗೆ ಮೌನಾಚರಣೆ ನಡೆಸಿದರು. ಕೇಂದ್ರ ಸರ್ಕಾರ ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಮುಖಂಡರು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ
ಘೋಷಣೆ ಕೂಗಿದರು.
ಅಣತಿಯಂತೆ ಸರ್ಕಾರ ನಡೆಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಅಂಬಾನಿ- ಅದಾನಿಗಳಿಗೆ ಶರಣಾಗಿರುವುದರಿಂದ
ಅವರ ಸಂಪತ್ತು ವೃದ್ಧಿಗೆ ಪೂರಕವಾಗಿರುವ ಕಾನೂನನ್ನೇ ಜಾರಿ ಮಾಡುತ್ತಾ ದೇಶದ ರೈತರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಮಾರಕವಾಗಿರುವ ಆಡಳಿತ ನೀಡುತ್ತಿದೆ ಎಂದರು.
ಸರ್ಕಾರ ಕೂಡಲೇ ರೈತರ ಪಾಲಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದರು. ಸಂವಿಧಾನ ಸಂರಕ್ಷಣಾ ಸಮಿತಿಯ ಸಂಚಾಲಕ ಗೌಸ್ ಮೊಹಿದ್ದೀನ್, ರೈತಸಂಘದ ಕೃಷ್ಣೇಗೌಡ, ನಿರಂಜನ್ ಮೂರ್ತಿ, ರಾಜಪ್ಪ, ಉಗ್ಗೇಗೌಡ,
ಉಮೇಶ್, ಕರವೇ ಮೂಡಿಗೆರೆ ತಾಲೂಕು ಅಧ್ಯಕ್ಷ ಪ್ರಸನ್ನ, ಸಂವಿಧಾನ ಸಂರಕ್ಷಣಾ ಸಮಿತಿಯ ಕೃಷ್ಣಮೂರ್ತಿ, ಆಪ್ ಪಕ್ಷದ ಡಾ| ಸುಂದರ್‌ಗೌಡ, ದಸಂಸ ಮುಖಂಡ ಗಣೇಶ್, ಇಲಿಯಾಸ್ ಅಹ್ಮದ್ ಮತ್ತಿತರರು ಇದ್ದರು.
Related Articles
Advertisement