Advertisement

Chikkamagaluru: ಬೆಳ್ಳಂ ಬೆಳಗ್ಗೆ ಒಂಟಿ ಸಲಗದ ಹಾವಳಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

11:01 AM Sep 29, 2024 | Team Udayavani |

ಚಿಕ್ಕಮಗಳೂರು: ಮಲೆನಾಡಲ್ಲಿ ನಿಲ್ಲದ ಒಂಟಿ ಸಲಗದ ಹಾವಳಿ, ಬೆಳ್ಳಂ ಬೆಳಗ್ಗೆ ಒಂಟಿ ಸಲಗ ಸಿಟಿ ರೌಂಡ್ಸ್ ಹೊಡೆದ ಘಟನೆ ‌ಜಿಲ್ಲೆಯ ಮೂಡಿಗೆರೆಯಲ್ಲಿ ಸೆ.29ರ ಭಾನುವಾರ ನಡೆದಿದೆ.

Advertisement

ಒಂಟಿ ಸಲಗ ರೌಂಡ್ಸ್ ಹಾಕುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಭಾನುವಾರ ಬೆಳಗಿನ ಜಾವ ಪಟ್ಟಣದಲ್ಲಿ ಅಡ್ಡಾದಿಡ್ಡಿ ಓಡಾಟ ನಡೆಸಿದ ಒಂಟಿ ಸಲಗ, ಮೂಡಿಗೆರೆ ಪಟ್ಟಣದ ಸಂತೆ ಮೈದಾನ, ಪಟ್ಟಣ ಪಂಚಾಯತ್ ರಸ್ತೆ, ಹೊಯ್ಸಳ ಕ್ರೀಡಾಂಗಣದ ಪಕ್ಕದಲ್ಲಿ ಒಂಟಿ ಸಲಗ ಓಡಾಟ ನಡೆಸಿದೆ.

ಒಂಟಿ ಸಲಗವನ್ನು ಕಾಡಿಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next