ಚಿಕ್ಕಮಗಳೂರು: ಜಿಲ್ಲೆ ಮಲೆ ನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಆಲ್ದೂರು ಭಾಗದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದು ಕೊಂಡಿದೆ. ಕಾಡಾನೆ ದಾಳಿಗೆ ಬುಧವಾರ ವೀಣಾ ಎಂಬುವರು ಮೃತಪಟ್ಟಿದ್ದು ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆಲ್ದೂರು ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಚೇರಿ ಮುಂದೇ ಚಿಕ್ಕಮಗಳೂರು -ಶೃಂಗೇರಿ ಸಂಪರ್ಕಿಸುವ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದರು.
ಆಲ್ದೂರು ಭಾಗದಲ್ಲಿ ಕಳೆದ ಅನೇಕ ತಿಂಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಇತ್ತಿಚೀಗೆ ಅರೇನೂರು ಬಳಿ ಚಿನ್ನಿ ಎಂಬುವರ ಮೇಲೆ ಕಾಡಾನೆ ದಾಳಿಗೆ ಮೃತಪಟ್ಟಿ ದ್ದರು. ಘಟನೆ ಮಾಸುವ ಮುನ್ನವೇ ಕಾಫಿತೋಟಕ್ಕೆ ಕೆಲಸಕ್ಕೆ ತೆರಳಿದ್ದ ವೀಣಾ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿದೆ. ಪದೇ ಪದೇ ಕಾಡಾನೆ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.
ಕಾಡಾನೆ ದಾಳಿಗೆ ನಿಯಂತ್ರಣ ಹಾಕುವಂತೆ ಆಗ್ರಹಿಸಿದರು.
ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಸ್ಥಳಕ್ಕೆ ಧಾವಿಸಿ ಪ್ರತಿಭಟನಕಾರರ ಅಹವಾಲುಗಳನ್ನು ಆಲಿಸಿದರು. ಅರಣ್ಯ ಇಲಾಖೆ ಆನೆ ಹಾವಳಿ ತಡೆಗಟ್ಟಲು ಇನ್ನೇಷ್ಟು ಬಲಿಬೇಕು ಎಂದು ಸ್ಥಳೀಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂಓದಿ: Shimoga ಡಿಸಿಸಿ ಬ್ಯಾಂಕಿನ ಹಗರಣದಲ್ಲಿ ಸಂಸದ ರಾಘವೇಂದ್ರ ಪಾತ್ರ ಇದೆ; ಶಾಸಕ ಗೋಪಾಲಕೃಷ್ಣ