ಚಿಕ್ಕಮಗಳೂರು: ನಾಲೆ ಒಡೆದು ಪ್ರವಾಹದಂತೆ ನೀರು ನುಗ್ಗಿ ಜಲಾವೃತವಾಗಿದ್ದ ಮನೆಯೊಂದರಲ್ಲಿ ಸಿಕ್ಕಿದ್ದ 9ಜನರನ್ನು ರಕ್ಷಿಸಿದ ಘಟನೆ ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ನಡೆದಿದೆ .
ಏಕಾಏಕಿ ನಾಲೆ ಒಡೆದು ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಜನ ಆತಂಕಕ್ಕೆ ಒಳಗಾಗಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸ್, ಅಗ್ನಿಶಾಮಕದಳ, ಅರಣ್ಯ ಹಾಗೂ ಕಂದಾಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ 5 ಮಹಿಳೆಯರು, 3 ಪುರುಷರು ಹಾಗೂ 4 ತಿಂಗಳ ಮಗುವನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ .
ನದಿಯಂತೆ ನೀರು ಉಕ್ಕಿ ಹರಿಯುತ್ತಿದ್ದು,ಹಗ್ಗದ ನೆರವಿನಿಂದ ಒಬ್ಬರ ಕೈ ಹಿಡಿದು ಒಬ್ಬರು ಹೊರಬಂದರಲ್ಲದೆ , ಭಾರೀ ಗಾತ್ರದ ಮರವೊಂದು ಬಿದ್ದಿದ್ದು ಅದಕ್ಕೆ ಹಗ್ಗವನ್ನು ಕಟ್ಟಿ ಜನರನ್ನು ಕರೆ ತರಲಾಗಿದ್ದು ಈ ಕಾರ್ಯಾಚರಣೆಯಲ್ಲಿ ಸ್ಥಳೀಯರು ಕೈಜೋಡಿಸಿದ್ದಾರೆ.
ಇದನ್ನೂ ಓದಿ :ಭೂಕುಸಿತ ಸಾಧ್ಯತೆ : ಚಾರ್ಮಾಡಿ ಘಾಟಿ ವಾಹನ ಸಂಚಾರ ಸಂಜೆ 7ರಿಂದ ಬೆಳೆಗ್ಗೆ 6ರವರೆಗೆ ಬಂದ್