ಚಿಕ್ಕಮಗಳೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಕಳೆದ ಮೂರು ವರ್ಷಗಳಿಂದ ಯುವತಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪದ ಯುವಕ ಹಾಗೂ ಅದೇ ಊರಿನ ಯುವತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ ಯುವತಿ ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಕೊಪ್ಪದ ಯುವಕ ಮಹಮ್ಮದ್ ರೌಫ್ ತನ್ನ ಸ್ನೇಹಿತರ ಜೊತೆಗೆ ಕಾರ್ಕಳಕ್ಕೆ ಬಂದು ಯುವತಿಯನ್ನು ಊಟಕ್ಕೆ ಕರೆದಿದ್ದಾರೆ ಈ ವೇಳೆ ಹೋಟೆಲ್ ಗೆ ಹೋಗುವ ವೇಳೆ ಕುಡಿಯಲು ಜ್ಯೂಸ್ ನೀಡಿ ಮತ್ತು ಬರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಅಲ್ಲದೆ ಈಕೆಯ ಜೊತೆಗಿರುವ ವಿಡಿಯೋ ರೆಕಾರ್ಡ್ ಮಾಡಿ ಪದೇ ಪದೇ ತನ್ನ ಜೊತೆ ಬರುವಂತೆ ಬಲವಂತ ಮಾಡಿದ್ದಾನೆ ಇದಕ್ಕೆ ಒಪ್ಪದೇ ಇದ್ದಾಗ ಈತನ ಗೆಳೆಯ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ ಹೀಗೆ ಮೂರು ವರ್ಷಗಳಿಂದ ಅಮಲು ಪದಾರ್ಥ ನೀಡಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ, ಅಲ್ಲದೆ ಅವರು ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ ನನ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ, ಚಾಕು, ಆಸಿಡ್ ತೋರಿಸಿ ಬಲವಂತವಾಗಿ ಅಮಲು ಪದಾರ್ಥ ಕುಡಿಸುತ್ತಿದ್ದರು ಎಂದು ನೊಂದ ಯುವತಿ ರಕ್ಷಣೆ ನೀಡುವಂತೆ ಠಾಣೆಗೆ ದೂರು ನೀಡಿದ್ದಾಳೆ.
ಹರಿಹರ ಪೊಲೀಸ್ ಠಾಣೆಯಲ್ಲಿ ಕೊಪ್ಪ ಮೂಲದ ಮಹಮ್ಮದ್ ರೌಫ್ , ಇರ್ಫಾನ್ , ಸೈಫ್ ಸೇರಿದಂತೆ ನಾಲ್ಕು ಜನರ ಮೇಲೆ ದೂರು ನೀಡಿದ ಯುವತಿ ಮಹಮ್ಮದ್ ರೌಫ್ ಬಲವಂತವಾಗಿ ಅಮಲು ಪದಾರ್ಥಗಳ ಜ್ಯೂಸ್ ಕುಡಿಸಿ ತಾಳಿ ಕಟ್ಟಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದಿದ್ದಾಳೆ.
ಇದನ್ನೂ ಓದಿ: ಅತ್ತೆ ಸಾವಿನ ಸುದ್ದಿ ತಂದ ಆಘಾತ; ಹೃದಯಾಘಾತಕ್ಕೀಡಾಗಿ ಅಳಿಯ ಸಾವು