ಚಿಕ್ಕಮಗಳೂರು : ಸ್ನೇಹಿತರ ನಡುವೆ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ತರೀಕೆರೆ ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ನಡೆದಿದೆ.
ಓಂಕಾರ (30) ಗಲಾಟೆಯಲ್ಲಿ ಕೊಲೆಯಾದ ದುರ್ದೈವಿ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಘಟನೆ ನಡೆದಿದ್ದು ಸುನೀಲ್, ಸಂತೋಷ್, ಧನರಾಜ್ ಸೇರಿ ಐದು ಮಂದಿ ಸೇರಿಕೊಂಡು ಸ್ನೇಹಿತ ಓಂಕಾರನನ್ನು ಕೊಲೆಗೈದಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು ಜಗಳ ವಿಕೋಪಕ್ಕೆ ತಿರುಗಿ ಐವರು ಸೇರಿ ಓಂಕಾರ ನನ್ನ ಕೊಲೆಗೈದಿದ್ದಾರೆ.
Related Articles
ಘಟನೆಗೆ ಸಂಬಂಧಿಸಿ ಸುನೀಲ್, ಸಂತೋಷ್, ಧನರಾಜ್ ನನ್ನು ತರೀಕೆರೆ ಪೊಲೀಸರು ಬಂಧಿಸಿದ್ದು ಇಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದು ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಧಾರ್ಮಿಕ ಮೆರವಣಿಗೆಗೆ ಬಂದಿದ್ದವರ ಮೇಲೆ ಹರಿದ ಟ್ರಕ್: ಮಕ್ಕಳು ಸೇರಿ 12 ಮಂದಿ ಸಾವು, ಪ್ರಧಾನಿ ಸಂತಾಪ