Advertisement

“ಚಿಕ್ಕ‌ಮಗಳೂರು ಮಾದರಿ ಜಿಲ್ಲೆಯನ್ನಾಗಿಸುವ ಸಂಕಲ್ಪ ‘

08:53 PM Apr 10, 2019 | sudhir |

ಉಡುಪಿ: ಚಿಕ್ಕಮಗಳೂರು ಕ್ಷೇತ್ರದಲ್ಲಿನ ರೈಲ್ವೇ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕಸ್ತೂರಿ ರಂಗನ್‌ ವರದಿಯ ಅನುಷ್ಠಾನದ ಅನಾಹುತ, ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ, ನೀರಾವರಿ ಯೋಜನೆಗಳ ಬಗ್ಗೆ ಸಂಸದರಾಗಿದ್ದ ಶೋಭಾ ಕರಂದ್ಲಾಜೆಯವರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.

Advertisement

ನನ್ನನ್ನು ಗೆಲ್ಲಿಸಿದ ಪಕ್ಷದಲ್ಲಿ ಒಬ್ಬ ನೈಜ ಜನಪ್ರತಿನಿಧಿಯಂತೆ ಪ್ರಾಮಾಣಿಕ ಸೇವೆ ಮಾಡುತ್ತೇನೆ. ಕೇಂದ್ರ, ರಾಜ್ಯ ಸರಕಾರದ ಅನುದಾನವನ್ನು ಉಡುಪಿ-ಚಿಕ್ಕಮಗಳೂರು ಭಾಗಕ್ಕೆ ತಂದು ಚಿಕ್ಕಮಗಳೂರು ಜಿಲ್ಲೆಯನ್ನು ದೇಶದಲ್ಲೇ ಮಾದರಿ ಜಿಲ್ಲೆಯನ್ನು ಮಾಡಬೇಕೆಂಬ ಸಂಕಲ್ಪ ಹೊಂದಿದ್ದೇನೆ ಎಂದರು.

ಭರ್ಜರಿ ಪ್ರಚಾರ
ಬೀಕನಹಳ್ಳಿ, ಕುರುವಂಗಿ, ತೇಗೂರು ಸರ್ಕಲ್‌, ಉಪ್ಪಳ್ಳಿ ಸರ್ಕಲ್‌, ಅಲ್ಲಂಪುರ, ಮಲ್ಲೇನಹಳ್ಳಿ, ಸಖರಾಯಪಟ್ಟಣ, ಪಿಳ್ಳೇನಹಳ್ಳಿ, ಹುಲಿಕೆರೆ, ಎಸ್‌.ಬಿದರೆ, ನಿಡಘಟ್ಟ, ದೇವನೂರು ಮುಂತಾದ ಕಡೆಗಳಲ್ಲಿ ಪ್ರಮೋದ್‌ ಮಧ್ವರಾಜ್‌ ಅವರು ಬಹಿರಂಗ ಪ್ರಚಾರ, ಪಾದಯಾತ್ರೆ ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next