Advertisement

ಚಿಕ್ಕಮಗಳೂರು: ಪುನೀತ್ ರಿಂದ ಪ್ರೇರೇಪಣೆ, ದೇಹದಾನಕ್ಕೆ ಮುಂದಾದ ಕಾಫಿನಾಡ ದಂಪತಿಗಳು

10:18 AM Nov 13, 2021 | Team Udayavani |

ಚಿಕ್ಕಮಗಳೂರು: ಸತ್ತ ಮೇಲೆ ಈ ದೇಹವನ್ನ ಮಣ್ಣು ತಿನ್ನುತ್ತೆ ಅದರ ಬದಲು ಪುನೀತ್ ಸರ್ ಅವರಂತೆ ದಾನ ಮಾಡಿದರೆ ಈ ನಮ್ಮ ದೇಹದ ಅಂಗಾಂಗಳಿಂದ ಮತ್ತೊಬ್ಬರ ಬದುಕು ಬೆಳಕಾಗುತ್ತೆ ಎಂದು ತಾಲೂಕಿನ ಅರೆನೂರು ಗ್ರಾಮದ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ದಂಪತಿಗಳು ತಮ್ಮ ದೇಹವನ್ನೇ ದಾನ ಮಾಡಲು ಮುಂದಾಗಿದ್ದಾರೆ.

Advertisement

ನಮ್ಮ ಈ ನಡೆಗೆ ಪುನೀತ್ ರಾಜ್ ಕುಮಾರ್ ಅವರ ಪ್ರೇರೇಪಣೆಯೇ ಕಾರಣ ಎಂದು ತಮ್ಮ ನಿರ್ಧಾರದ ಕುರಿತು ಮಾಹಿತಿ ನೀಡಿದ್ದಾರೆ. ತಾಲೂಕಿನ ಅರೆನೂರು ಗ್ರಾಮದ ಸುಪ್ರಿತ್ ಹಾಗೂ ಲಕ್ಷ್ಮೀ ದಂಪತಿ ತಮ್ಮ ದೇಹವನ್ನು ಉಡುಪಿಯ ಕೆ.ವೈ.ಸಿ.ಆಸ್ಪತ್ರೆಗೆ ನೀಡಲು ಮುಂದಾಗಿದ್ದಾರೆ.

ಮನುಷ್ಯನಾಗಿ ಹುಟ್ಟಿ ಸತ್ತ ಬಳಿಕ ಈ ದೇಹವನ್ನ ಮಣ್ಣಲ್ಲಿ ಕೊಳೆಸುವುದಕ್ಕಿಂತ ನಮ್ಮ ದೇಹದ ಅಂಗಾಂಗಳು ಮತ್ತೊಬ್ಬರಿಗೆ ಉಪಯೋಗಕ್ಕೆ ಬರಬೇಕು ಎಂದು ಈ ದಂಪತಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ:ಚಿತ್ರರಂಗದ ಪರವಾಗಿ ಪುನೀತ್‌ ನಮನ

ನಾವು ಚಿಕ್ಕಂದಿನಿಂದಲೂ ಪುನೀತ್ ಸರ್ ಸಿನಿಮಾ ನೋಡಿಕೊಂಡು ಬಂದಿದ್ದೇವೆ. ಒಂದೊಂದು ಸಿನಿಮಾಗಳು ಒಂದಕ್ಕಿಂತ ಚೆನ್ನಾಗಿವೆ. ನಮ್ಮ ಈ ನಡೆಗೆ ಅವರೇ ಪ್ರೇರೇಪಣೆ ಎಂದಿದ್ದಾರೆ. ಅವರು ಅಷ್ಟು ದೊಡ್ಡ ವ್ಯಕ್ತಿಯಾದರೂ ಅವರ ಸಮಾಜಮುಖಿ ಕಾರ್ಯಗಳು ಬಹುತೇಕರಿಗೆ ಗೊತ್ತಿರಲಿಲ್ಲ. ನಮಗೂ ಗೊತ್ತಿರಲಿಲ್ಲ. ಅವರು ಸತ್ತ ಬಳಿಕವಷ್ಟೆ ಗೊತ್ತಾಗಿದ್ದು. ಅವರೇ ತಮ್ಮ ಕಣ್ಣುಗಳನ್ನ ದಾನ ಮಾಡಿದ್ದಾರೆ ಅಂದರೆ, ದೇಹವನ್ನ ಮಣ್ಣು ತಿನ್ನೋದಕ್ಕಿಂತ ನಾಲ್ಕು ಜನಕ್ಕೆ ಬೆಳಕಾಗಿಸಬಹುದು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುತಾರೆ ಈ ದಂಪತಿ.

Advertisement

ದೇಹದಾನಕ್ಕೆ ಮುಂದಾಗಿರುವ ಲಕ್ಷ್ಮೀ ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಗಂಡ ಹೆಂಡತಿ ಮಾತನಾಡಿಕೊಂಡು, ಮನೆಯವರ ಒಪ್ಪಿಗೆ ಪಡೆದು ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಇಂದು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿಯವರ ಊರಾದ ತಾಲೂಕಿನ ಮಲ್ಲಂದೂರು ಸಮೀಪದ ಭಾಗ್‍ಮನೆ ಬಳಿ ಇರುವ ಆವುತಿ ಗ್ರಾಮದಲ್ಲಿ ಪುನೀತ್ ರಾಜ್‍ಕುಮಾಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಈ ವೇಳೆ, ಸುಮಾರು 40ಕ್ಕೂ ಹೆಚ್ಚು ಜನ ನೇತ್ರದಾನಕ್ಕೆ ಮುಂದಾಗಿದ್ದಾರೆ.

ಹೆಸರು ನೋಂದಾಯಿಸಿಕೊಂಡವರು ನಮ್ಮ ಬಳಿಕ ನಮ್ಮ ಕಣ್ಣುಗಳು ಮತ್ತೊಂದು ಜೀವ ಜಗತ್ತನ್ನ ನೋಡಲು ಸಹಕಾರಿಯಾಗಲಿದೆ. ಇದಕ್ಕೆ ನಮಗೆ ಪುನೀತ್ ರಾಜ್ ಕುಮಾರ್ ಅವರೇ ಪ್ರೇರಣೆ ಎಂದು ನೇತ್ರದಾನಕ್ಕೆ ಮುಂದಾಗಿದ್ದಾರೆ. ಬದುಕಿದ್ದಷ್ಟು ದಿನ ಭಾವನಾತ್ಮಕ ಜೀವಿಯಾಗಿದ್ದ ಪವರ್ ಸ್ಟಾರ್ ಪುನೀತ್ ಸಾವಿನ ಬಳಿಕ ಸಮಾಜಮುಖಿ ಸೇವೆಯಿಂದ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next