Advertisement

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ, ಅಕ್ರಮ ಕಟ್ಟಡಗಳು ನೆಲಸಮ

06:00 PM Jun 19, 2022 | Team Udayavani |

ಚಿಕ್ಕಮಗಳೂರು : ನಗರ ಸಭೆಯ ಜಾಗವನ್ನು ಒತ್ತುವರಿ ಮಾಡಿದವರಿಗೆ ಅಧಿಕಾರಿಗಳು ಜೆಸಿಬಿ ಮೂಲಕ ಕಟ್ಟಡ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಶಾಕ್ ನೀಡಿದ್ದಾರೆ.

Advertisement

ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ್ದ ಕಟ್ಟಡವನ್ನು ಅಧಿಕಾರಿಗಳ ಹಾಗೂ ಪೊಲೀಸರ ಸಹಕಾರದಿಂದ ತೆರವುಗೊಳಿಸಲಾಯಿತು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಒಂದು ವಾರದ ಹಿಂದೆ ಅಕ್ರಮ ಗೋಮಾಂಸ ಅಡ್ಡೆ ಮೇಲೆ ಜೆಸಿಬಿ ದಾಳಿ ನಡೆಸಿ ಅಕ್ರಮವಾಗಿ ನಡೆಸುತ್ತಿದ್ದ ಅಡ್ಡೆಯನ್ನು ಕೆಡವಿದ್ದಾರೆ. ಇದರೊಂದಿಗೆ ನಗರಸಭೆಯ ಜಾಗ ಒತ್ತುವರಿ ಮಾಡಿದವರ ಮೇಲೂ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳದಿಂದ ದರ್ಶನ ಮುಗಿಸಿ ಬರುವ ವೇಳೆ ಮರಕ್ಕೆ ಢಿಕ್ಕಿ ಹೊಡೆದ ಕಾರು: ತಂದೆ-ಮಗ ಸಾವು

Advertisement

Udayavani is now on Telegram. Click here to join our channel and stay updated with the latest news.

Next