Advertisement
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015-16ನೇ ಸಾಲಿನಲ್ಲಿ ಜಿಲ್ಲೆಗೆ ಹೊಸದಾಗಿ 13 ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಸ್ವಂತ ಕಟ್ಟಡ ನಿರ್ಮಾಣವಾಗುವವರೆಗೂ ಅವುಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಈಗ 10 ಶಾಲೆಗಳಿಗೆ ಜಾಗವನ್ನು ಗುರುತಿಸಲಾಗಿದೆ. ಉಳಿದ 3 ಶಾಲೆಗಳಿಗೂ ಒಂದು ವಾರದೊಳಗಾಗಿ ಜಾಗವನ್ನು ಗುರುತಿಸಲಾಗುವುದು. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.
Related Articles
Advertisement
ವಾಟ್ಸ್ ಆಪ್: ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿತ ಆಹಾರ ನೀಡಬೇಕು. ಆದರೆ ಆಯಾ ದಿನ ನೀಡಬೇಕಿದ್ದ ಆಹಾರವನ್ನು ನೀಡದೆ ಬೇರೆ ಆಹಾರ ನೀಡುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿತ್ತು. ಇದನ್ನು ತಡೆಗಟ್ಟಲು ಇಲಾಖೆ ಮುಂದಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಎಲ್ಲ ವಿದ್ಯಾರ್ಥಿನಿಲಯಗಳ ವಾರ್ಡನ್‌ಗಳನ್ನು ಒಳಗೊಂಡಂತೆ ವಾಟ್ಸ್ ಆಪ್ ಗ್ರೂಪ್‌ಗ್ಳನ್ನು ಮಾಡಲಾಗಿದೆ. ಆ ಗ್ರೂಪ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರೂ ಸೇರಿದಂತೆ ಹಿರಿಯ ಅಧಿಕಾರಿಗಳು ಇರುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ವಿದ್ಯಾರ್ಥಿಗಳಿಗೆ ನೀಡುವ ಸಂದರ್ಭದಲ್ಲಿ ವಾರ್ಡನ್‌ಗಳು ಆಹಾರ ಪದಾರ್ಥದ ಫೋಟೊ ತೆಗೆದು ವಾಟ್ಸ್ ಆಪ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಇಲಾಖೆಯ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳು, ಇಲಾಖಾ ವ್ಯಾಪ್ತಿಯ ಭವನಗಳ ಕುರಿತ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ 191 ಕಾಮಗಾರಿಗಳು ನಡೆಯುತ್ತಿದ್ದು, ಈ ಪೈಕಿ 180 ಕಾಮಗಾರಿಗಳನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. 181 ಬವನಗಳಲ್ಲಿ 176 ನ್ನು ಅಪ್‌ಡೇಟ್ ಮಾಡಲಾಗಿದೆ. ಸಾರ್ವಜನಿಕರು ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಅವುಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಲಾಖಾ ವತಿಯಿಂದ 58 ವಿದ್ಯಾರ್ಥಿನಿಲಯಗಳನ್ನು ನಡೆಸಲಾಗುತ್ತಿದೆ. ಈ ಪೈಕಿ ನರಸಿಂಹರಾಜಪುರ ತಾಲೂಕಿನ 2 ಹಾಗೂ ಮೂಡಿಗೆರೆ ತಾಲೂಕಿನ 1 ವಿದ್ಯಾರ್ಥಿನಿಲಯಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಈಗ ಅದಕ್ಕೆ ಜಾಗವನ್ನು ಗುರುತಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ದಲಿತ ದೌರ್ಜನ್ಯ ಪ್ರಕರಣಗಳಿಗೆ 2018-19ನೇ ಸಾಲಿನಲ್ಲಿ 41ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಕೆಲವೊಂದು ಪ್ರಕರಣಗಳಿಗೆ ಪರಿಹಾರ ನೀಡುವುದು ಬಾಕಿ ಇದ್ದು, ಅದನ್ನು ಚುನಾವಣಾ ನೀತಿ ಸಂಹಿತೆ ತೆರವುಗೊಂಡ ನಂತರ ವಿತರಿಸಲಾಗುವುದು ಎಂದರು.
ಅಂತರ್ಜಾತಿ ವಿವಾಹ
2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 277 ಅಂತರ್ಜಾತಿ ವಿವಾಹಗಳಾಗಿದ್ದು, ಅವರಿಗೆ 3.30 ಕೋಟಿ ರೂ.ಗಳನ್ನು ಇಲಾಖಾ ವತಿಯಿಂದ ನೀಡಲಾಗಿದೆ. ಪರಿಶಿಷ್ಟ ಜಾತಿಯ ಹುಡುಗ ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದರೆ 2.50 ಲಕ್ಷ ರೂ. ಪರಿಶಿಷ್ಟ ಜಾತಿಯ ಹುಡುಗಿಯನ್ನು ಬೇರೆ ಜಾತಿಯ ಹುಡುಗ ವಿವಾಹವಾದರೆ 3 ಲಕ್ಷ ರೂ. ನೀಡಲು ಅವಕಾಶವಿದೆ. ಅದರಂತೆ 277 ಪ್ರಕರಣಗಳಿಗೆ 3.30 ಕೋಟಿ ರೂ. ನೀಡಲಾಗಿದೆ. ಅದೇ ರೀತಿ ಪರಿಶಿಷ್ಟ ಜಾತಿಯಲ್ಲಿರುವ ಒಳ ಜಾತಿಗಳವರು ವಿವಾಹವಾದ ಪ್ರಕರಣಗಳು 11 ಇದ್ದು ಅವರಿಗೆ 22 ಲಕ್ಷ ರೂ. ನೀಡಲಾಗಿದೆ.
•ಬಿ. ಮಲ್ಲಿಕಾರ್ಜುನ್,
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ.