Advertisement

ಚಿಕ್ಕಮಗಳೂರು: ಅಥ್ಲೆಟಿಕ್ ಕೋಚ್ ನಿಂದ ಅಪ್ರಾಪ್ತ ವಯಸ್ಕ ಕ್ರೀಡಾಪಟುವಿಗೆ ಲೈಂಗಿಕ ಕಿರುಕುಳ

11:43 AM Feb 28, 2023 | Team Udayavani |

ಚಿಕ್ಕಮಗಳೂರು: ಅಥ್ಲೆಟಿಕ್ ತರಬೇತುದಾರನೊಬ್ಬ ಅಪ್ರಾಪ್ತ ವಯಸ್ಕ ಕ್ರೀಡಾಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ದೂರು ದಾಖಲಾಗುತ್ತಿದ್ದಂತೆ ಕೋಚ್ ನಾಪತ್ತೆಯಾಗಿದ್ದಾನೆ.

Advertisement

ಜಿಲ್ಲಾ ಕ್ರೀಡಾ ಅಥ್ಲೆಟಿಕ್ಸ್ ತರಬೇತುದಾರ ಭರತ್. ಎಸ್ ಎಂಬಾತ ಕೃತ್ಯವೆಸಗಿದ್ದು, 14 ವರ್ಷದ ರಾಷ್ಟ್ರೀಯ ಮಹಿಳಾ ಟ್ರಯಾಥ್ಲಾನ್ ಕ್ರೀಡಾ ಪಟು ದೂರು ನೀಡಿದ್ದಾರೆ.

ದೂರಿನಲ್ಲೇನಿದೆ: ಬಿಹಾರದ ಪಾಟ್ನಾದಲ್ಲಿ‌ ಆಯೋಜಿಸಿದ್ದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜನೆ ಮಾಡಿದ್ದ ಕ್ರೀಡಾಕೂಟದಲ್ಲಿ ತಂಡ ಭಾಗಿಯಾಗಿತ್ತು. ಕ್ರೀಡಾಕೂಟ ಮುಗಿಸಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಿನಲ್ಲಿ ಬರುವಾಗ ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆಯಯಲ್ಲಿ ಅಥ್ಲೆಟಿಕ್ಸ್ ‌ ತರಬೇತುದಾರ ಭರತ್.ಎಸ್ ಬಾಲಕಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಅಲ್ಲದೆ ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾನೆ.

ಇದನ್ನೂ ಓದಿ:ಮಣಿಪುರ, ಮೇಘಾಲಯ, ಅಫ್ಘಾನಿಸ್ತಾನ ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ

ಬಾಲಕಿ ತನ್ನ ತಾಯಿಯ ಬಳಿ ಈ ವಿಚಾರ ತಿಳಿಸಿದ್ದು, ಬಳಿಕ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಗೆ ದೂರು ನೀಡಲಾಗಿದೆ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಲಾಗಿದ್ದು, ಸದ್ಯ ಭರತ್ ಎಸ್ಕೇಪ್ ಆಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next