ಚಿಕ್ಕಮಗಳೂರು : ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಶ್ವಾನ ಪ್ರದರ್ಶನಕ್ಕೆ ಆಗಮಿಸಿದ ಚಾರ್ಲಿ 777 ಚಿತ್ರದ ಶ್ವಾನದೊಂದಿಗೆ ಸಿ.ಟಿ. ರವಿ ರೌಂಡ್ಸ್ ಹಾಕಿ ಗಮನಸೆಳೆದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಬಿಸ್ಕೆಟ್ಟ್ ಕೊಡ್ತೀನಿ ಬಾ ಎಂದು ಕರೆದು ರೌಂಡ್ಸ್ ಗೆ ಶ್ವಾನವನ್ನು ಕರೆದೊಯ್ದರು.ಚಾರ್ಲಿ 777 ಖ್ಯಾತಿಯ ಶ್ವಾನವನ್ನು ಮುದ್ದಾಡಿದರು.
ನಗರದ ಬೈಪಾಸ್ ರಸ್ತೆಯ ಬಿ.ಎಡ್.ಕಾಲೇಜ್ ಆವರಣದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಶ್ವಾನಗಳು ಆಗಮಿಸಿದ್ದರೂ, ಚಾರ್ಲಿ ಶ್ವಾನ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಪ್ರಜಾಧ್ವನಿ ಯಾತ್ರೆಗೆ ವ್ಯಂಗ್ಯ
Related Articles
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ಸಿಗರು ಜನ ಸೇರಿಸೋದು, ಮೋದಿಗೆ ಜನ ಸೇರೋದು. ಮೋದಿ ಬರ್ತಾರೆ ಅಂದ್ರೆ ಲಕ್ಷ-ಲಕ್ಷ ಜನ ಸೇರುತ್ತಾರೆ, ಸೇರೋದಕ್ಕೂ, ಸೇರ್ಸೋದಕ್ಕೂ ವ್ಯತ್ಯಾಸವಿದೆ. ಸೇರ್ಸೋದು ಹಲವು ಕಾರಣಕ್ಕೆ, ಸೇರೋದು ಪ್ರೀತಿಗೆ ಮಾತ್ರ. ಪ್ರಜೆಗಳ ಬಲ ಮೋದಿಯವರ ಜೊತೆ ಇದೆ. ಆದರೆ, ಕಾಂಗ್ರೆಸ್ ಪ್ರಜೆಗಳ ಧ್ವನಿಯನ್ನ ಅವರು ಕೇಳಬೇಕು, ಅವರ ಧ್ವನಿಯನ್ನ ಪ್ರಜೆಗಳಿಗೆ ಕೇಳಿಸುತ್ತಿದ್ದಾರೆ ಎಂದರು.
ಪಿಎಫ್ಐ ಕಾರ್ಯಕರ್ತರನ್ನ ಬಿಟ್ಟಿದ್ದು, ಅಮಾಯಕರ ಹತ್ಯೆಯಾಗಿದ್ದು, ರಿಡೂ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದದ್ದು, ಜನ ಅವರ ಸಾಧನೆಯನ್ನ ಪಿಸುಗುಡುತ್ತಿಲ್ಲ, ಕೂಗಿ-ಕೂಗಿ ಹೇಳುತ್ತಿದ್ದಾರೆ. ಪ್ರಜಾಧ್ವನಿ ಅಂದರೆ ಪ್ರಜೆಗಳ ಧ್ವನಿಯನ್ನ ಕೇಳಬೇಕು, ಇವರು ಮೈಕ್ ಹಿಡಿದು ಕೂಗೋದಲ್ಲ. ನಮ್ಮ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧ್ವನಿ ಚುನಾವಣೆಯಲ್ಲಿ ಕೇಳುತ್ತದೆ. ಕಾಂಗ್ರೆಸಿಗರಿಗೆ ಗತಿ ಇಲ್ಲ ಇಟಲಿ ರಾಣಿಯನ್ನ, ಬಂಡವಾಳ ಮಾಡಿಕೊಂಡಿದ್ದಾರೆ ಎಂದರು.
ರಾಮನ ಹೆಸರು ಬರೆದರೆ ಮುಳುಗುವ ಕಲ್ಲು ತೇಲುತ್ತಿತ್ತು. ಕಾಂಗ್ರೆಸಿಗರು ಮೋದಿ ಹೆಸರೇಳಿದರೆ ಮುಳುಗುವವರು ತೇಲಬಹುದು. ಕಾಂಗ್ರೆಸ್ಸಿಗರು ಮೋದಿ ಹೆಸರನ್ನು ಬಂಡವಾಳ ಮಾಡಿಕೊಳ್ಳಲಿ, ಬೇಡ ಅಂದವರು ಯಾರು? ಮೋದಿ, ಈ ಮಣ್ಣಿನ ಮಗ ಸಾಮಾನ್ಯವಾದ ಬಡ ಕುಟುಂಬದಿಂದ ಬಂದವರು. 20 ವರ್ಷದಿಂದ ಒಂದೇ ಒಂದು ಹಗರಣ ಕೂಡ ಇಲ್ಲದ ನಾಯಕತ್ವ.ಪ್ರತಿ ಸಂದರ್ಭದಲ್ಲಿ ದಲಿತರು ಮಹಿಳೆಯರು ಬಡವರ ಅಭಿವೃದ್ಧಿ ಹಾಗೂ ಗೌರವದ ಬಗ್ಗೆ ಚಿಂತಿಸುವವರು. ಅಂಬೇಡ್ಕರ್ ಅವರ ಲೆಗಸಿಯನ್ನ ಎತ್ತಿ ಹಿಡಿಯುವ ಕೆಲಸ ಮಾಡಿದವರು. ಅಂಥವರನ್ನು ನಾವು ಬಂಡವಾಳ ಮಾಡಿಕೊಳ್ಳದೆ ಕಾಂಗ್ರೆಸ್ಸಿಗರು ಮಾಡಿಕೊಳ್ಳಲು ಸಾಧ್ಯವೇ? ಮೋದಿ ಅಂತ ನಾಯಕರಿಲ್ಲ ಎಂದು ಅವರು ಬಂಡವಾಳ ಮಾಡಿಕೊಳ್ಳಲಿ ಬೇಡ ಅಂದವರು ಯಾರು. ನಾಳೆಯಿಂದ ಮೋದಿ ಮಾಡಿರುವ ಒಳ್ಳೆಯ ಕೆಲಸವನ್ನು ಹೇಳಿಕೊಂಡು ಓಡಾಡಲಿ ಬೇಡ ಅಂದವರು ಯಾರು. ಕಾಂಗ್ರೆಸಿಗರು ಮೋದಿ ಹೆಸರೇಳಿ ಡೆಪಾಸಿಟ್ ಹೋಗೋದನ್ನ ತಪ್ಪಿಸಿಕೊಳ್ಳಬಹುದು, ತಪ್ಪಿಸಿಕೊಳ್ಳಲಿ ಎಂದು ಸವಾಲು ಹಾಕಿದರು.