Advertisement

Chikkamagaluru; ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು

05:59 PM May 17, 2023 | Team Udayavani |

ಚಿಕ್ಕಮಗಳೂರು: ತಾಲೂಕಿನ ಕವಿಕಲ್ ಗಂಡಿ ಬಳಿ ಬುಧವಾರ ಪ್ರವಾಸಿಗರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಕಾರು ಪ್ರಪಾತಕ್ಕೆ ಬಿದ್ದಿದ್ದು, ಗಾಯಾಳುಗಳು ಮೈಸೂರಿನ ಕೆ.ಅರ್ ನಗರದಿಂದ ಪ್ರವಾಸಕ್ಕೆ ಬಂದಿದ್ದರು. ಸೀತಾರಾಮ್, ಸುಗುಣ, ಶ್ರೇಯಸ್, ಶುಭಾ ಅನ್ನುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಚಿಕ್ಕಮಗಳೂರು ಪ್ರವಾಸ ಮುಗಿಸಿ ವಾಪಸ್ ತೆರಳುವಾಗ ಕಾರು ಪ್ರಪಾತಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಗಾಯಳುಗಳನ್ನು ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೆಚ್ಚಿನ ವಿವರ ನಿರಿಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next