ಚಿಕ್ಕಮಗಳೂರು : ನಗರದ ನಲ್ಲೂರು ಗ್ರಾಮದಲ್ಲಿ ಸೋಮವಾರ ನಡೆದ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಕೆಸರುಗದ್ದೆಗೇ ಇಳಿದು ಜನರೊಂದಿಗೆ ಬೆರೆತು ಗಮನ ಸೆಳೆದರು.
Advertisement
ಚಿಕ್ಕಮಗಳೂರು ಜಿಲ್ಲಾ ಉತ್ಸವ ಅಂಗವಾಗಿ ಏರ್ಪಡಿಸಿದ್ದ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಮಕ್ಕಳೊಂದಿಗೆ ಕೆಸರುಗದ್ದೆಯಲ್ಲಿ ಇಳಿದು ಅಖಾಡದಲ್ಲಿ ಸ್ಪರ್ಧಾಳುಗಳೊಂದಿಗೆ ಓಡಿದರು.
ಜಿಲ್ಲಾಧಿಕಾರಿ ಜೊತೆಗೆ ಉಪವಿಭಾಗಾಧಿಕಾರಿ, ನಗರಸಭೆ ಅಧ್ಯಕ್ಷ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಕೆಸರು ಗದ್ದೆಯಲ್ಲಿ ಎದ್ದು,ಬಿದ್ದು ಓಡಿ ಗಮನ ಸೆಳೆದರು.