Advertisement
ನಗರದ ಕಾಮಧೇನು ಗಣಪತಿ ದೇವಳ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಾಜಿ ಸಚಿವ ಡಿ.ಎನ್.ಜೀವರಾಜ್, ವಿಎಚ್ ಪಿ ಮುಖಂಡ ರಘು ಸಕಲೇಶಪುರ ಸಾಥ್ ನೀಡಿದರು.
Related Articles
Advertisement
ಮೆರವಣಿಗೆ ಸಾಗುತ್ತಿದ್ದಂತೆ ವಾಹನದಲ್ಲಿ ಸಾಗಿ ಬಂದ ಡಿ.ಜೆ.ಸದ್ದಿಗೆ ಮಹಿಳೆಯರು, ವೃದ್ಧರಾದಿಯಾಗಿ ಪುಟಾಣಿ ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಶೋಭಾಯಾತ್ರೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಸ್ ಪಿ ಡಾ.ವಿಕ್ರಮ್ ಅಮಟೆ ಭದ್ರತೆ ನೇತೃತ್ವ ವಹಿಸಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಸಿಸಿ ಕ್ಯಾಮರ ಕಣ್ಗಾವಲಿನಲ್ಲಿ ಮೆರವಣಿಗೆ ಸಾಗಿತು.