Advertisement

Chikkamagaluru: ಈ ಹೇಡಿ ಸರ್ಕಾರ ಗಣಪತಿ ಕೂರಿಸದವರನ್ನೇ A1 ಮಾಡಿದೆ: ಸಿ.ಟಿ.ರವಿ

03:18 PM Sep 14, 2024 | Team Udayavani |

ಚಿಕ್ಕಮಗಳೂರು: ಯಾವ ಸಾಬರ ಮೇಲೂ ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಿಲ್ಲ, ತಲ್ವಾರ್ ಝಳಪಿಸಿದ್ದು ಮತಾಂಧ ತುರುಕರು ಎಂದು ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ನಾಗಮಂಗಲ ಗಣಪತಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿ‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಲ್ವಾರ್ ಝಳಪಿಸಿದ್ದು, ಕಲ್ಲು ತೂರಿ, ಪೆಟ್ರೋಲ್ ಬಾಂಬ್ ಹಾಕಿದ್ದು ಮತಾಂಧ ತುರುಕರು ಎಂದು ಹೇಳಿದರು.

ಮುಂದುವರೆದು ಮಾತನಾಡಿ, ಅವರ ಮೇಲೆ ಕ್ರಮ ಆಗಬೇಕಿತ್ತು, ಈ ಹೇಡಿ ಸರ್ಕಾರ ಗಣಪತಿ ಕೂರಿಸದವರನ್ನೇ A1 ಮಾಡಿದೆ. 1-18ರ ಆರೋಪಿಗಳು ಶಾಂತಿಯುತ ಮೆರವಣಿಗೆ ಮಾಡಿದವರು. ಓಲೈಕೆ ರಾಜನೀತಿ ಪರಿಣಾಮ ಮತಾಂಧತೆಗೆ ಕೊನೆ ಇಲ್ಲದಂತಾಗಿದೆ ಎಂದರು.

ಗಣಪತಿ ಮೆರವಣಿಗೆ ಬರಬೇಡ ಅನ್ನೋಕು ಅವನು ಯಾವನು. ಮೊದಲು ಅವನನ್ನು ಒದ್ದು ಒಳಗೆ ಹಾಕಬೇಕಿತ್ತು. ಸರ್ಕಾರ A1 ಮಾಡಿರೋದು ಗಣಪತಿ ಕೂರಿಸಿದವರನ್ನು, ನಾಚಿಕೆ ಆಗಬೇಕು ಇವ್ರಿಗೆ, ಗಣೇಶನ ಮೆರವಣಿಗೆ ಶಾಂತಿಯುತವಾಗಿತ್ತು, ಪೆಟ್ರೋಲ್ ಬಾಂಬ್, ಕಲ್ಲು, ತಲ್ವಾರ್ ಇಟ್ಟುಕೊಂಡಿರಲಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.