ಚಿಕ್ಕಮಗಳೂರು : ಕೆಲಸಕ್ಕೆ ಸೇರುವಾಗ ತೋಟದ ಮಾಲೀಕನಿಂದ ದುಡ್ಡು ಪಡೆದು ವಾಪಸ್ಸು ನೀಡದ ಆರೋಪದ ಮೇಲೆ ತೋಟದ ಮಾಲೀಕ ತನ್ನ ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ತೋಟದ ಮಾಲೀಕನಲ್ಲಿ ಮುಂಗಡವಾಗಿ ಒಂಬತ್ತು ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎನ್ನಲಾಗಿದೆ ಆದರೆ ಈಗ ಕಾರ್ಮಿಕರು ಬೇರೆ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಮಾಲೀಕರಲ್ಲಿ ಹೇಳಿದ್ದಾರೆ ಅದಕ್ಕೆ ಮಾಲೀಕ ತನ್ನಿಂದ ಮುಂಗಡವಾಗಿ ಪಡೆದಿರುವ ಹಣವನ್ನು ಹಿಂದೆ ಕೊಡುವಂತೆ ಕಾರ್ಮಿರಲ್ಲಿ ಕೇಳಿದ್ದಾರೆ, ಅದಕ್ಕೆ ಕಾರ್ಮಿಕರು ಸದ್ಯ ನಮ್ಮ ಬಳಿ ಹಣ ಇಲ್ಲ ಸ್ವಲ್ಪ ಸಮಯ ಕೊಡಿ ನಿಮ್ಮ ದುಡ್ಡು ವಾಪಸ್ಸು ನೀಡುತ್ತೇವೆಂದು ಹೇಳಿದ್ದಾರೆ, ಇದರಿಂದ ಕೋಪಗೊಂಡ ತೋಟದ ಮಾಲೀಕ ದುಡ್ಡು ಕೊಡುವವರೆಗೆ ಇಲ್ಲಿಂದ ಹೋಗುವಹಾಗಿಲ್ಲ ಎಂದು ಕಾರ್ಮಿಕರನ್ನು ತನ್ನ ತೋಟದ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ತೋಟದ ಮಾಲೀಕರ ಜೊತೆ ಮಾತನಾಡುವ ಸಂದರ್ಭದ ವಿಡಿಯೋ ಚಿತ್ರೀಕರಣವನ್ನು ಕಾರ್ಮಿಕ ಮಹಿಳೆಯೊಬ್ಬರು ಮಾಡಿದ್ದಾರೆ ಇದರಿಂದ ಕೋಪಗೊಂಡ ಮಾಲೀಕ ಆಕೆ ಗರ್ಭಿಣಿ ಎನ್ನದೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ಇದನ್ನು ತಡೆಯಲು ಬಂದವರ ಮೇಲೂ ಹಲ್ಲೆ ನಡೆಸಿದ್ದಾರೆ.
ಸದ್ಯ ಮಹಿಳೆ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಕುರಿತು ಮಾತನಾಡಿದ ಕಾರ್ಮಿಕ ಕುಟುಂಬ ಹಲ್ಲೆ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕಾರ್ಮಿಕ ಕುಟುಂಬ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮೀಸಲಾತಿ ಬಗ್ಗೆ ನಿರ್ಧರಿಸಿದ್ದೇವೆ; ಕ್ರೆಡಿಟ್ ತಗೋಳ್ತೇವೆ: ನಳಿನ್ ಕುಮಾರ್ ಕಟೀಲ್