Advertisement

ವೈದ್ಯರಿಗೆ ಕೋವಿಡ್ ನೆಗೆಟಿವ್‌; ಜನರ ನಿಟ್ಟುಸಿರು

07:06 PM May 28, 2020 | Team Udayavani |

ಚಿಕ್ಕಮಗಳೂರು: ಮಲೆನಾಡಿನ ಜನರನ್ನು ಬೆಚ್ಚಿಬಿಳಿಸಿದ್ದ ಮೂಡಿಗೆರೆ ತಾಲೂಕಿನ ಸರ್ಕಾರಿ ವೈದ್ಯರ ಕೋವಿಡ್ ಪ್ರಕರಣ ಫಾಲ್ಸ್‌ ಪಾಸಿಟಿವ್‌ ಪ್ರಕರಣವಾದ ಹಿನ್ನೆಲೆಯಲ್ಲಿ ಕಾಫಿ ನಾಡಿನ ಜನತೆ ನಿಟ್ಟುಸಿರು ಬಿಟ್ಟಿದ್ದು ಮೂಡಿಗೆರೆ ಜನರಲ್ಲಿ ಸಂತಸ ಮೂಡಿಸಿದೆ.

Advertisement

ಮೇ 19ರಂದು ಐದು ಕೋವಿಡ್ ಸೋಂಕು ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಐದು ಪ್ರಕರಣದ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ವೈದ್ಯರಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ನಂದೀಪುರ ವೈದ್ಯನಲ್ಲಿ ಸೋಂಕು ತಗುಲಿದೆ ಎಂಬ ಸುದ್ದಿ ಭಿತ್ತರವಾಗುತ್ತಿದ್ದಂತೆ ಇಡೀ ಜಿಲ್ಲೆಯೇ ತಲ್ಲಣಗೊಂಡಿತ್ತು. ಜನಪ್ರಿಯ ವೈದ್ಯರಾಗಿದ್ದ ಅವರ ಬಳಿ ನೆರೆಯ ಜಿಲ್ಲೆ ಹಾಸನದಿಂದಲೂ, ಚಿಕ್ಕಮಗಳೂರು ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದಲೂ ಜನ ಚಿಕಿತ್ಸೆಗೆ ಆಗಮಿಸುತ್ತಿದ್ದರು. ಸುಭಾಶ್‌ ನಗರದಲ್ಲಿನ ಅವರ ಮನೆಯಲ್ಲೂ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರಿಗೆ ಸೋಂಕು ತಗುಲಿದೆ ಎಂಬ ಸುದ್ದಿಯಿಂದ ವೈದ್ಯರಿಂದ ತಪಾಸಣೆಗೆ ಒಳಗಾಗಿದ್ದ ಸಾವಿರಾರು ಮಂದಿ ಸೋಂಕಿಗೆ ತುತ್ತಾಗಿರಬಹುದೆಂಬ ಭೀತಿಯಿಂದಾಗಿ ಮೂಡಿಗೆರೆ ಸೇರಿದಂತೆ ಹಾಸನ ಜಿಲ್ಲೆಯ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲಾದ್ಯಂತ ಜನರು ಆತಂಕಕ್ಕೊಳಗಾಗಿದ್ದರು.

ವೈದ್ಯರ ಸೋಂಕು ತಪಾಸಣೆಗೆ ಒಳಗಿದ್ದ ರೋಗಿಗಳಿಗೆ ತಗುಲಿದರೆ ಗತಿಯೇನು ಎಂಬ ಚಿಂತೆ ಇಡೀ ಜಿಲ್ಲೆಯನ್ನು ಕಾಡಿತ್ತು. ಜಿಲ್ಲಾಡಳಿತ ವೈದ್ಯರು ಕೆಲಸ ಮಾಡಿದ್ದ ಆಸ್ಪತ್ರೆ ಹಾಗೂ ಅವರು ವಾಸವಿದ್ದ ಮೂಡಿಗೆರೆ ಮನೆಯ ಸುತ್ತಮುತ್ತ ಸೀಲ್‌ಡೌನ್‌ ಮಾಡಿದ್ದಲ್ಲದೆ ಪ್ರಥಮ, ದ್ವಿತೀಯ ಸಂಪರ್ಕದಲ್ಲಿದ್ದ ಸುಮಾರು 900 ಮಂದಿಯನ್ನು ಪತ್ತೆ ಮಾಡಿ ಕ್ವಾರಂಟೈನ್‌ ಕೇಂದ್ರಗಳಿಗೆ ರವಾನಿಸಿತ್ತು. ಕೋವಿಡ್ ನಿಗಾ ಘಟಕದಲ್ಲಿ ಇರಿಸಲಾಗಿದ್ದ ವೈದ್ಯರನ್ನು ಶನಿವಾರ ಬಿಡುಗಡೆಗೊಳಿಸಿ ಮನೆಗೆ ಕಳಿಸಲಾಗಿದೆ. ವೈದ್ಯರ ಪ್ರಥಮ, ದ್ವಿತೀಯ ಸಂಪರ್ಕಕ್ಕೊಳಗಾಗಿ ಮೂಡಿಗೆರೆ ತಾಲೂಕಿನ ವಿವಿಧ ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ 900ಕ್ಕೂ ಹೆಚ್ಚು ಜನರನ್ನೂ ಬಿಡುಗಡೆ ಮಾಡಿ ಮನೆಗೆ ಕಳಿಸಲಾಗಿದೆ. ಮೂಡಿಗೆರೆ ಸುಭಾಷ್‌ ನಗರಕ್ಕೆ ಆಗಮಿಸುತ್ತಿದ್ದಂತೆ ವೈದ್ಯರು ಆಗಮಿಸುತ್ತಿದ್ದಂತೆ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಚಪ್ಪಾಳೆ ತಟ್ಟಿ ಬರ ಮಾಡಿಕೊಂಡಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next