ಚಿಕ್ಕಮಗಳೂರು: ಅಪಘಾತದಲ್ಲಿ ಕೆ.ಎಸ್.ಆರ್.ಟಿ.ಸಿ. ಕಂಡಕ್ಟರ್ ಮೃತಪಟ್ಟಿದ್ದು, ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನ.21ರ ಗುರುವಾರ ನಡೆದಿದೆ.
ಶ್ರೀನಾಥ್ (40) ಮೃತಪಟ್ಟ ಕಂಡಕ್ಟರ್.
ಘಟನೆಯ ವಿವರ: ನ.21ರ ಗುರುವಾರ ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗಿದ್ದ ಸರ್ಕಾರಿ ಬಸ್, ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಬೆಳಗ್ಗೆ 9 ಗಂಟೆಗೆ ಕೆಟ್ಟು ನಿಂತಿತ್ತು. ಆದರೆ ಮೆಕ್ಯಾನಿಕ್ ರಾತ್ರಿ 9 ಗಂಟೆಗೆ ಹೋಗಿದ್ದರು. ಬಸ್ ರಿಪೇರಿ ಮಾಡುವಾಗ ಡ್ರೈವರ್ ಗೆ ಕಿಟಕಿಯಿಂದ ಊಟ ಕೊಡಲು ಹೋದ ಕಂಡಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಿಟಕಿಯಿಂದ ಊಟ ಕೊಡುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಮೃತಪಟ್ಟರು. ಕಂಡಕ್ಟರ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಮೃತದೇಹವನ್ನು ಡಿಪೋದಲ್ಲಿಟ್ಟು ದಲಿತ ಸಂಘಟನೆಗಳಿಂದ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಮಗಳೂರು ಡಿಪೋದಲ್ಲಿ ನೂರಾರು ದಲಿತ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ.