Advertisement

Chikkamagaluru: ಬಂದೂಕಿನಿಂದ ಗುಂಡು ಹಾರಿಸಿ ಕೊ*ಲೆ: ಆರೋಪಿಗೆ ಜೀವಾವಧಿ

09:06 PM Oct 10, 2024 | Team Udayavani |

ಚಿಕ್ಕಮಗಳೂರು: ಸಾಲ ವಾಪಾಸ್ ಕೇಳಿದ್ದಕ್ಕೆ ಮರಗೆಲಸ ವೃತ್ತಿ ಮಾಡುತ್ತಿದ್ದ ನಾಗೇಶ್ ಆಚಾರಿ ಎಂಬುವರನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಮೃತದೇಹವನ್ನು ಹೂತು ಹಾಕಿದ್ದ ಆರೋಪಿಗಳಿಗೆ ಘನ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿದೆ.

Advertisement

ಪ್ರಕರಣದ ಒಂದನೇ ಆರೋಪಿ ಯಾದ ಕೃಷ್ಣೇಗೌಡನಿಗೆ ಜೀವಾವಧಿ ಶಿಕ್ಷೆ ಮತ್ತು ಐವತ್ತು ಸಾವಿರ ದಂಡ, ಎರಡನೇ ಆರೋಪಿ ಬಿ.ಸಿ.ಉದಯ ಈತನಿಗೆ ಮೂರು ವರ್ಷ ಕಠಿಣ ಶಿಕ್ಷೆ ಹಾಗೂ ಮೂರು ಸಾವಿರ ರೂ. ದಂಡ ವಿಧಿಸಿ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶರಾದ ಬಿ.ಸಿ. ಭಾನುಮತಿ ಅವರು ತೀರ್ಪು ನೀಡಿದ್ದಾರೆ.ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಲಾಗಿದೆ.

ಘಟನೆ ವಿವರ:

ನವೆಂಬರ್ 25 2021ರಲ್ಲಿ ನಾಗೇಶ್ ಆಚಾರಿ ಮೂಡಿಗೆರೆ ತಾಲೂಕಿನ ಬಿದಿರುತಳ ಗ್ರಾಮದ ಬಾಳೂರು ಬಿ.ಎಂ.ಕೃಷ್ಣೇಗೌಡ ಅವರ ನೂತನ ಮನೆ ನಿರ್ಮಾಣದ ಮರಗೆಲಸಕ್ಕೆ ಮೂರು ದಿನಗಳ ತೆರಳುವುದಾಗಿ ಪತ್ನಿ ಸುಮಾ ಅವರಿಗೆ ತಿಳಿಸಿ ಹೋಗಿದ್ದರು.

ನ.28ರಂದು ಕೃಷ್ಣೇಗೌಡ, ಸುಮಾ ಅವರಿಗೆ ದೂರವಾಣಿ ಕರೆ ಮಾಡಿ ಮೀನು ಹಿಡಿಯಲು ಹಳ್ಳಕ್ಕೆ ಹೋಗಿ ಬರುವಾಗ ನಾಗೇಶ್ ಆಚಾರಿ ಕಾಣಿಯಾಗಿದ್ದಾರೆ. ಎಷ್ಟೇ ಹುಡುಕಿದರು ಪತ್ತೆಯಾಗಿಲ್ಲವೆಂದು ತಿಳಿಸಿದ್ದಾನೆ.

Advertisement

ಸುಮಾ ಅವರು ಬಾಳೂರು ಪೊಲೀಸ್ ಠಾಣೆಯಲ್ಲಿ ನಾಗೇಶ್ ಆಚಾರಿ ಕಾಣಿಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹಾಗೂ ಸುಮಾ ಅವರ ಸಂಬಂಧಿಕರು ಹುಡುಕಲು ಆರಂಭಿಸಿದ್ದು ಬಾಳೂರು ಮೀಸಲು ಅರಣ್ಯದಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಲೆ ಪ್ರಕರಣ ಸಂಬಂಧ ಆರೋಪಿಗಳಾದ ಕೃಷ್ಣೇಗೌಡ ಹಾಗೂ ಬಿ.ಸಿ.ಉದಯ ಅವರನ್ನು ಬಂಧಿಸಿ ತನಿಖೆ ಕೈಗೊಂಡು ದೋಷರೋಪಣ ಪಟ್ಟಿಯನ್ನು ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಜೆ.ಸಿ. ಸೋಮಶೇಖರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಾದವನ್ನು ಆಲಿಸಿದ ನ್ಯಾಯಾ ಧೀಶರು ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ. ಸರ್ಕಾರ ದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಎಸ್. ಲೋಹಿತಾಶ್ವಚಾರ್ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next