ಚಿಕ್ಕಮಗಳೂರು: ಈ ಬಾರಿಯ ಮಳೆಗೆ ಕಾಫಿನಾಡಲ್ಲಿ ಮೊದಲ ಬಲಿಯಾಗಿದೆ. ಬೈಕ್ ಮೇಲೆ ಮರ ಬಿದ್ದ ಕಾರಣ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ನಡೆದಿದೆ.
ಚಿಕ್ಕಹಳ್ಳ ಗ್ರಾಮದಲ್ಲಿ ಹೋಂ ಸ್ಟೇ ನಡೆಸುತ್ತಿದ್ದ ವೇಣುಗೋಪಾಲ್ (45) ಮೃತ ದುರ್ದೈವಿ.
ವೇಣುಗೋಪಾಲ್ ನಲ್ಲಿ ಒಂದೇ ಒಂದು ನಿಮಿಷ ತಡವಾಗಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು. ಆದರೆ ಹೋಂಸ್ಟೇ ತುಸು ದೂರದಲ್ಲಿ ಮರ ಬಿದ್ದು ಸಾವನ್ನಪ್ಪಿದ್ದಾರೆ. ಒಂದರ ಹಿಂದೆ ಒಂದರಂತೆ ಒಂದೇ ಕಾಲಕ್ಕೆ ಮೂರು ಮರಗಳು ಬಿದ್ದಿವೆ.
ಇದನ್ನೂ ಓದಿ:Article 370 ಮರುಸ್ಥಾಪಿಸುವವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಮೆಹಬೂಬಾ ಮುಫ್ತಿ
Related Articles
ಮೂಲತಃ ಉತ್ತರ ಕರ್ನಾಟಕ ಮೂಲದ ವೇಣುಗೋಪಾಲ್ ಅವರು ಮೂಡಿಗೆರೆಯಲ್ಲಿ ಮದುವೆಯಾಗಿ ಇಲ್ಲೇ ವಾಸವಿದ್ದರು. ಹೋಂ ಸ್ಟೇ ಜೊತೆ ಮೂಡಿಗೆರೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿದ್ದರು.
ಆಲ್ದೂರು ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.