ಚಿಕ್ಕಮಗಳೂರು : ನಗರದಲ್ಲಿ ಸ್ಟೈಲಾಗಿ ಡ್ರೆಸ್ ಮಾಡಿಕೊಂಡು ಬಂದ ಐವರು ಯುವತಿಯರ ತಂಡ ಹಣ ವಸೂಲಿ ಮಾಡುತ್ತಿರುವ ದಂಧೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಮನೆ-ಅಂಗಡಿಗಳಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದರು. ಮನೆ ಬಿದ್ದು ಹೋಗಿದೆ, ಬಟ್ಟೆ ಇಲ್ಲ ಎಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಪ್ರಕೃತಿ ವಿಕೋಪದಿಂದ ಮನೆ-ಆಸ್ತಿ ಕಳೆದುಕೊಂಡಿದ್ದೇವೆಂದು ಅನುಕಂಪ ಮೂಡಿಸುತ್ತಿದ್ದರು. ಯುವತಿಯರು ರಾಜಸ್ಥಾನದಿಂದ ಬಂದವರು ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ನಗರ ನಿವಾಸಿಯೊಬ್ಬರು ಯುವತಿಯರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಸ್ಥಳಿಯರು ಪ್ರಶ್ನೆ ಮಾಡುತ್ತಿದ್ದಂತೆ ಆಟೋ ಹತ್ತಿ ಪರಾರಿಯಾಗಿದ್ದಾರೆ. 10ರೂ. 20ರೂ. ಕೊಟ್ಟರೆ ತೆಗೆದುಕೊಳ್ಳುತ್ತಿರಲಿಲ್ಲ, 100, 200 ರೂಪಾಯಿಯನ್ನೇ ಕೊಡಬೇಕು ಎಂದು ಪಟ್ಟು ಹಿಡಿಯುತ್ತಿದ್ದರು ಎಂದು ತಿಳಿದುಬಂದಿದೆ.