ಚಿಕ್ಕಮಗಳೂರು: ನಗರದಲ್ಲಿ ಗೋ ಮಾಂಸ ಮಾರಾಟಗಾರರ ಪೆರೇಡ್ ಮಾಡಿರುವ ಪೊಲೀಸರು, 30 ಜನ ಗೋಮಾಂಸ ಮಾರಾಟಗಾರರಿಗೆ ಪೊಲೀಸರು ವಾರ್ನಿಂಗ್ ಮಾಡಿದ್ದಾರೆ.
ಚಿಕ್ಕಮಗಳೂರು ನಗರ ಸಭೆಯಿಂದಲೂ ಗೋಮಾಂಸ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿತ್ತು, ಅಲ್ಲದೆ ಗೋಮಾಂಸ ಅಡ್ಡೆಗಳ ಮೇಲೆ ಬುಲ್ಡೋಜರ್ ಪ್ರಯೋಗ ಮಾಡಿತ್ತು.
ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಘಾಸಿ; ಆಲ್ಟ್ ನ್ಯೂಸ್ ಸಂಸ್ಥಾಪಕ ಜುಬೈರ್ ಬಂಧನ
10ಕ್ಕೂ ಹೆಚ್ಚು ಗೋ ಮಾಂಸ ಮಾರಾಟಗಾರರ ಮನೆಗಳಿಗೆ ನೋಟಿಸ್ ಅಂಟಿಸಿದ್ದ ನಗರಸಭೆಯು, ಗೋ ಮಾಂಸ ದಂಧೆ ನಡೆಸಿದರೆ ಅಂಗಡಿ-ಮನೆಗಳನ್ನ ತೆರವು ಮಾಡುವ ಎಚ್ಚರಿಕೆ ನೀಡಿತ್ತು. ನಗರಸಭೆಯಿಂದ ಗೋಮಾಂಸ ಅಡ್ಡೆಗಳ ಮೇಲೆ ದಾಳಿ ಹಿನ್ನೆಲೆ ಪೊಲೀಸರು ಪೆರೇಡ್ ನಡೆಸಿ ಎಚ್ಚರಿಕೆ ನೀಡಿದೆ.