ಚಿಕ್ಕಮಗಳೂರು : ಫೈನ್ ಹಾಕಿದ್ದಕ್ಕೆ ಜಡ್ಜ್ ಮೇಲೆ ವ್ಯಕ್ತಿ ಯೊಬ್ಬ ಚಪ್ಪಲಿ ತೂರಿದ ಘಟನೆ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ಶುಕ್ರವಾರ ನಡೆದಿದೆ.
ಘಟನೆ ಬಳಿಕ ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿ ಆರೋಪಿ ಲೋಕೇಶ್ ಎಂಬಾತನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಶಾಸಕ ಹರೀಶ್ ಪೂಂಜಾ ಮೇಲೆ ದಾಳಿ ಯತ್ನ ಕೇಸ್ ; ಓರ್ವ ವಶಕ್ಕೆ
ತಿಂಗಳ ಹಿಂದೆ ಡ್ರಿಂಕ್ ಅಂಡ್ ಡ್ರೈವ್ ಕೇಸಲ್ಲಿ ಟ್ರಾಫಿಕ್ ಪೊಲೀಸರು ಕೋರ್ಟ್‍ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಲೋಕೇಶ್ ದಂಡ ಕಟ್ಟಿದ್ದ. ಇಂದು ಕುಡಿದು ಮತ್ತೆ ಕೋರ್ಟಿಗೆ ಬಂದು ಜಡ್ಜ್ ಮೇಲೆ ಚಪ್ಪಲಿ ತೂರಿ, ನಾನು ಏನು ತಪ್ಪು ಮಾಡಿದ್ದೇನೆಂದು ಫೈನ್ ಹಾಕಿದ್ದೀರಿ ಎಂದು ಕೂಗಾಡಿದ್ದಾನೆ
Related Articles
ಚಿಕ್ಕಮಗಳೂರು ನಗರ ಠಾಣೆಯಲ್ಲಿ ಲೋಕೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.