Advertisement
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಮಸ್ಯೆ ಅಥವಾ ಕೊರತೆ ಇದ್ದಲ್ಲಿ ಅವುಗಳನ್ನು ಶೀಘ್ರವೇ ಪರಿಹರಿಸಿಕೊಳ್ಳಬೇಕು. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಕೋವಿಡ್ ನಿಯಂತ್ರಿ ಸಲು ಸಹರಿಸಬೇಕು. ಸರ್ಕಾರದ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತರಬೇಕು ಎಂದರು.
Related Articles
Advertisement
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಸಿಗೆ ಸಿದ್ಧವಿಟ್ಟುಕೊಳ್ಳಬೇಕು. ಆಂಬ್ಯುಲೆನ್ಸ್ ಕೊರತೆಯನ್ನು ತಕ್ಷಣವೇ ನೀಗಿಸಬೇಕೆಂದರು. ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ಮಾತ ನಾಡಿ, ಪ್ರತಿ ದಿನ ಆಕ್ಸಿಜನ್ ಎಷ್ಟು ಬಳಕೆಯಾ ಗುತ್ತಿದೆ. ಎಷ್ಟು ಕೊರತೆ ಇದೆ ಎಂದು ಮೇಲ್ವಿ ಚಾರಣೆ ನಡೆಸಲು ಪ್ರತಿ ತಾಲೂಕಿಗೆ ಒಬ್ಬ ವೈದ್ಯಾಧಿಕಾರಿಯನ್ನು ನೇಮಕ ಮಾಡಿ, ನಿಖರ ಮಾಹಿತಿ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗೆ ಸೂಚಿಸಿ ದರು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಕೊರತೆ ಬಾರದಂತೆ ನಿಗಾ ವಹಿಸಬೇಕು. ಕೋವಿಡ್ ಕೆಲಸ ನಿರ್ವಹಿಸಲು ಸಿಬ್ಬಂ ದಿ ಕೊರತೆ ಕಂಡು ಬಂದಲ್ಲಿ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ತಿಳಿಸಿದರು. ಕೋವಿಡ್ ಮತ್ತು ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ ಔಷ ಧಿ ಖರೀದಿಸಿ ಸಂಗ್ರಹಿಸಿ ಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ 3,57,354 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 3,35,944 ಮಂದಿ ನೆಗೆಟಿವ್ ಬಂದಿದೆ. 18,942 ಜನರಲ್ಲಿ ಸೋಂಕು ದೃಢವಾಗಿದೆ. 2,468 ಜನರ ಫಲಿ ತಾಂಶ ಬಾಕಿ ಇದೆ ಎಂದರು.
ಜಿಪಂ ಸಿಇಒ ಎಸ್.ಪೂವಿತ, ಎಸ್ಪಿ ಎಂ.ಎಚ್.ಅಕ್ಷಯ್, ಅಪರ ಡಿಸಿ ಬಿ.ಆರ್.ರೂಪ, ಉಪವಿಭಾಗಾಧಿ ಕಾರಿ ಎಲ್.ನಾಗರಾಜ್ ಇತರರಿದ್ದರು.