ಕೊಪ್ಪ: ಕೋವಿಡ್ ಶೀಘ್ರಗತಿಯಲ್ಲಿ ಹರಡುತ್ತಿದ್ದು ಮುಂದಿನ ಕೆಲ ದಿನಗಳು ನಿರ್ಣಾಯಕವಾಗಿವೆ. ಅ ಧಿಕಾರಿ ವರ್ಗದವರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಕೋವಿಡ್ ವ್ಯಾಪಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು. ಮಂಗಳವಾರ ಪಟ್ಟಣದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಚರ್ಚಿಸಲಾಯಿತು.
ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ಜೊತೆಗೆ ಖಾಸಗಿ ಆಸ್ಪತ್ರೆಗಳೊಂದಿಗೂ ಮಾತನಾಡಿ ಬೆಡ್‌ಗಳನ್ನು ಕಾಯ್ದಿರಿಸಬೇಕು. ಅಗತ್ಯ ಬಿದ್ದಲ್ಲಿ ಹಾಸ್ಟೆಲ್‌ಗಳು, ಮೊರಾರ್ಜಿ ಶಾಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಕೊಪ್ಪದಲ್ಲಿ ಎಎಲ್‌ಎನ್ ರಾವ್ ಆಯುರ್ವೆದಿಕ್ ಆಸ್ಪತ್ರೆ, ಶೃಂಗೇರಿಯಲ್ಲಿ ಶ್ರೀಮಠದ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಕಾಯ್ದಿರಿಸಲು ವ್ಯವಸ್ಥೆ ಮಾಡಬೇಕು.
ಆಸ್ಪತ್ರೆಗಳ ಆಂಬ್ಯುಲೆನ್ಸ್ ವಾಹನದ ಜೊತೆಗೆ, ಮೂರು ತಾಲೂಕುಗಳ ಪಟ್ಟಣ ಪಂಚಾಯತ್‌ಗಳಿಗೆ ನೀಡಿರುವ ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಿ. ಕೆಟ್ಟು ಹೋಗಿರುವ ಆಂಬ್ಯುಲೆನ್ಸ್ ಗಳನ್ನು ದುರಸ್ತಿ ಮಾಡಿಸಿ. ಆಂಬ್ಯುಲೆನ್ಸ್ ಡ್ರೈವರ್ ಗಳು, ನರ್ಸ್‌ಗಳು, ಗ್ರೂಪ್- ಡಿ ನೌಕರರ ಕೊರತೆಯಿದ್ದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಳ್ಳಿ ಎಂದರು. ಕೊಪ್ಪ ತಾಲೂಕು ಆರೋಗ್ಯಾ ಧಿಕಾರಿ ಮಹೇಂದ್ರ ಕಿರೀಟಿ ಮಾತನಾಡಿ, ಆರ್‌ಟಿಪಿಸಿಆರ್ ಫಲಿತಾಂಶ ವಿಳಂಬವಾಗುತ್ತಿದೆ.
ರ್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಒದಗಿಸಬೇಕು. ಕೊಪ್ಪದಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆಯಿದೆ. ಕ್ಷೇತ್ರದ ಮೂರು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 18 ವೆಂಟಿಲೇಟರ್‌ಗಳಿದ್ದರೂ ಟೆಕ್ನಿಶಿಯನ್ ಇಲ್ಲದೇ ಉಪಯೋಗವಾಗುತ್ತಿಲ್ಲ. ಸ್ಟಾಪ್ ನರ್ಸ್, ಗ್ರೂಪ್ ಡಿ. ನೌಕಕರ ಕೊರತೆಯಿದೆ. 1 ಆಂಬ್ಯುಲೆನ್ಸ್ ಕೆಟ್ಟು ನಿಂತಿದೆ ಎಂದರು. ಡಿವೈಎಸ್‌ಪಿ ಎಸ್. ರಾಜು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಕೆಲವರಿಗೆ ಕೊರೊನಾ ಸೋಂಕು ತಗಲಿದೆ. ಇತರ ಇಲಾಖೆಗಳ ಕೆಲವರಿಗೆ ಸೋಂಕು ತಗಲಿದೆ. ಇದರಿಂದ ಸೋಂಕಿತರು ಮತ್ತು ಅವರ ಪ್ರಾಥಮಿಕ ಸಂಪರ್ಕಿತರು ಸೇರಿ ಹೆಚ್ಚಿನ ಸಿಬ್ಬಂ ಗಳು ಕರ್ತವ್ಯಕ್ಕೆ ಹಾಜರಾಗಲು ಆಗುತ್ತಿಲ್ಲ. ಆರ್‌ಟಿಪಿಸಿಆರ್ ಫಲಿತಾಂಶ ವಿಳಂಬವಾಗುತ್ತಿದ್ದು, ರ್ಯಾಪಿಡ್ ಟೆಸ್ಟ್ ಕಿಟ್ ಇದ್ದಲ್ಲಿ ಬೇಗ ಫಲಿತಾಂಶ ಬಂದು ನೆಗೆಟಿವ್ ಇದ್ದರೆ ಬೇಗ ಕರ್ತವ್ಯಕ್ಕೆ ಹಾಜರಾಗಲು ಅನುಕೂಲವಾಗುತ್ತದೆ ಎಂದರು.
ಕೆಲವು ಕೊರೊನಾ ಸೋಂಕಿತರೇ ತಮ್ಮ ವಾಹನದಲ್ಲಿ ಜನರನ್ನು ಸಾಗಿಸುತ್ತಿದ್ದಾರೆ ಎಂಬ ದೂರುಗಳಿವೆ. ಶೃಂಗೇರಿಯಲ್ಲಿ ಕೊರೊನಾ ಹರಡುವ ತೀವ್ರತೆ ಹೆಚ್ಚಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ದೂರಿದರು. ಅಧಿ ಕಾರಿ ವರ್ಗ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಶೃಂಗೇರಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಿ ಜನರಲ್ ಪೇಷೆಂಟ್‌ಗಳಿಗೆ ಬೇರೆಡೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಒಳ್ಳೆಯದು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಟಿ.ಡಿ. ರಾಜೇಗೌಡ, ಜಿಪಂ ಸದಸ್ಯ ಎಸ್.ಎನ್. ರಾಮಸ್ವಾಮಿ, ಕೊಪ್ಪ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ನಾಗರಾಜ್, ನರಸಿಂಹರಾಜಪುರದ ಪ್ರೇಮಾ ಮತ್ತಿತರರು ಇದ್ದರು.