ಖಾತೆಯಲ್ಲಿ ಹಣವಿದೆಎಂದು ಸುಳ್ಳು ಹೇಳುವ ಮೂಲಕಮಲೆನಾಡು ಜನರ ಕಿವಿಗೆ ಹೂ ಇಡುವಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ಜಿಲ್ಲಾಧ್ಯಕ್ಷ ಡಾ|ಅಂಶುಮಂತ್‌ಆರೋಪಿಸಿದರು.
Advertisement
ಬುಧವಾರ ಪತ್ರಿಕಾ ಹೇಳಿಕೆನೀಡಿರುವ ಅವರು, 15ನೇ ಹಣಕಾಸುಆಯೋಗದ ಅನುದಾನದಲ್ಲಿಗ್ರಾಪಂಗಳಿಗೆ ನೀಡುತ್ತಿದ್ದ ಅನುದಾನದಲ್ಲಿಶೇ.10 ಕಡಿತಗೊಳಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆನೀಡುತ್ತಿದ್ದ ವಿದ್ಯಾರ್ಥಿ ವೇತನ ಹಾಗೂಸಾಲ ಯೋಜನೆಗಳಿಗೆ ಅನುದಾನಬಿಡುಗಡೆ ಮಾಡದ ಕಾರಣವಿದ್ಯಾರ್ಥಿಗಳು ಮತ್ತುಪೋಷಕರು ತೊಂದರೆಅನುಭವಿಸುತ್ತಿದ್ದಾರೆ. ಕಳೆದಬಾರಿಯ ಗ್ರಾಪಂ ಸದಸ್ಯರಿಗೆನೀಡುತ್ತಿದ್ದ ಗೌರವಧನವನ್ನುಸರ್ಕಾರ ನೀಡಿಲ್ಲ ಏಕೆ ಎಂದುಪ್ರಶ್ನಿಸಿದ್ದಾರೆ.
ಬಡವರಿಗೆ ಮೋಸ ಮಾಡಿದ್ದಾರೆ. ಬಡವರು ಬದುಕಿಗಾಗಿ ಸಾಗುಮಾಡಿಕೊಂಡು ಬರುತ್ತಿರುವ ಜಮೀನಿಗೆಹಕ್ಕು ಪತ್ರವನ್ನು ಏಕೆ ಕೊಡಲಿಲ್ಲ ಏಕನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್‌ವರದಿ, ಒತ್ತುವರಿ ಸಮಸ್ಯೆ ಪರಿಹರಿಸಲುಮಾಜಿ ಶಾಸಕರು ಪ್ರಯತ್ನಿಸಲಿಲ್ಲ.ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇಸರ್ಕಾರ ಇದ್ದರೂ ಸಮಸ್ಯೆಗಳನ್ನುಜೀವಂತವಾಗಿಟ್ಟಿರುವುದಾದರೂ ಏಕೆಎಂದು ಪ್ರಶ್ನಿಸಿರುವ ಅವರು, ಬಡರೈತರು ಸಾಗುವಳಿ ಮಾಡುತ್ತಿರುವಜಮೀನು ಸಕ್ರಮಗೊಳಿಸಲು ನಮ್ಮಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದಫಾರಂ 57 ಅರ್ಜಿಗಳನ್ನು ಅಕ್ರಮ
ಸಕ್ರಮ ಸಮಿತಿ ಮುಂದೆ ಮಂಡಿಸಲಿಲ್ಲ.ಧೂಳು ಹಿಡಿದು ಬಿದ್ದಿರುವ ಕಡತಗಳನ್ನುವಿಲೇವಾರಿ ಮಾಡುವ ಜವಾಬ್ದಾರಿಕಂದಾಯ ಸಚಿವರಿಗೆ ಸೇರಿದ್ದಲ್ಲವೇಎಂದು ಪ್ರಶ್ನಿಸಿದ್ದಾರೆ.
Related Articles
Advertisement