Advertisement

ಮಾತೃಭಾಷಾ ಶಿಕ್ಷಣ ನೀತಿ ಜಾರಿಗೊಳಿಸಿ

05:28 PM Jan 26, 2021 | Team Udayavani |

ಅಜ್ಜಂಪುರ: 1-5 ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಎಂಬ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೇಂದ್ರಕ್ಕೆ ಹಕ್ಕೊತ್ತಾಯ ಮಂಡಿಸಿದರು.

Advertisement

ತಾಲೂಕಿನ ಬುಕ್ಕಾಂಬು ಧಿಯಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಾಧ್ಯವಾದಷ್ಟು ಪ್ರಾದೇಶಿಕ ಭಾಷೆ. ಇದು ಈಗಿರುವ ಶಿಕ್ಷಣ ನೀತಿ. ಇದನ್ನು ಬದಲಿಸಿ, ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎಂದರು. ಶಿವಮೊಗ್ಗದಲ್ಲಿ ನಡೆದ ಅಮಿತ್‌ ಶಾ ಅವರ ಕಾರ್ಯಕ್ರಮದಲ್ಲಿ ಹಿಂದಿ, ಇಂಗ್ಲಿಷ್‌ ಬಳಸಲಾಗಿತ್ತು. ಕನ್ನಡಕ್ಕೆ ಆದ್ಯತೆ ಇರಲಿಲ್ಲ. ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳು ಕೂಡ ಆಗಿರುವ ಲೋಪ ಸರಿಪಡಿಸಲಿಲ್ಲ. ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಬದಲಿಗೆ
ಸಮರ್ಥಿಸಿಕೊಳ್ಳಲು ಮುಂದಾದರು. ಇದು ದುರದೃಷ್ಟಕರ ಎಂದು ವಿಷಾದಿಸಿದರು.

ಹಿಂದಿ ಹೇರಿಕೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ಕನ್ನಡದ ವೇದಿಕೆಯಲ್ಲಿಯೇ ನಿಂತು ಹಿಂದಿ ಭಾಷೆಯನ್ನು ತಬ್ಬಿಕೊಳ್ಳಬೇಕು ಎಂದು ಹೇಳಿಕೆ ನೀಡಿರುವ ದೊಡ್ಡರಂಗೇಗೌಡರ ದೋರಣೆ ಪ್ರಶ್ನಾರ್ಹ. ಕೂಡಲೇ ಗೌಡರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಈ ಬಾರಿಯ ದೆಹಲಿಯ ಗಣರಾಜ್ಯೋತ್ಸವಕ್ಕೆ, ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಸ್ಥಬ್ದಚಿತ್ರವನ್ನು ಸಿದ್ಧಗೊಳಿಸಲಾಗಿದೆ. ಅದರಲ್ಲಿ ಹಿಂದಿಯ ಬರವಣಿಗೆ ಮಾತ್ರವಿದ್ದು, ಕನ್ನಡವನ್ನು ಕಡೆಗಣಿಸಲಾಗಿದೆ. ಆಗಿರುವ ತಪ್ಪು ಸರಿಪಡಿಸಿ. ಅದಕ್ಕೆ ಅವಕಾಶ ದೊರೆಯದಿದ್ದರೆ ಸ್ಥಬ್ದಚಿತ್ರವನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಕನ್ನಡಿಗರು ಹೆಚ್ಚಿರುವ ಮಹಾರಾಷ್ಟ್ರದ ಬಾಂಬೆ, ಸೊಲ್ಲಾಪುರ, ಕೊಲ್ಲಾಪುರದಲ್ಲಿ ಕನ್ನಡದ ಬಾವುಟ ಹಾರಿಸುವ ಗಟ್ಟಿ ನಿಲುವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕು. ಅದಕ್ಕೆ ಮಂತ್ರಿಮಂಡಲ ಹಾಗೂ ಲೋಕಸಭಾ ಸದಸ್ಯರು ಧ್ವನಿಗೂಡಿಸಬೇಕು ಎಂದು
ಒತ್ತಾಯಿಸಿದರು.

Advertisement

ಹಂಪಾ ನಾಗರಾಜಯ್ಯ, ನಾಡಿನ ಹಿರಿಯ ಸಾಹಿತಿ. ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿ, ಮುಚ್ಚಳಿಕೆ ಬರೆಸಿಕೊಂಡಿದ್ದು ತಪ್ಪು. ಇದು ಅವರಿಗೆ ಮಾಡಿದ ಅವಮಾನ ಅಲ್ಲ. ಕನ್ನಡಿಗರಿಗೆ ಮಾಡಿದ ಅಪಮಾನ. ನಾಡೋಜ ಪುರಸ್ಕೃತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ಪಿಎಸ್‌ಐಗೆ ಇಲ್ವಾ? ಇಷ್ಟೂ ಘಟನೆ ನಡೆಯುವಾಗಲೂ ಸರ್ಕಾರ ಏನು ಮಾಡುತ್ತಿದೆ ಎಂದು ಹರಿಹಾಯ್ದರು.

ಓದಿ : ಬಡಮನೆ ಗುಡ್ಡ ಕುಸಿತ ಪ್ರಕರಣ:ಮುಂದುವರಿದ ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿ ತೆರವು ಕಾರ್ಯಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next