ಅಜ್ಜಂಪುರ: ಭಾಷೆ, ನೆಲ-ಜಲಕ್ಕೆ ಕುತ್ತು ಬಂದಾಗ ಕನ್ನಡ ಸಾಹಿತ್ಯ ಪರಿಷತ್ತನ್ನು ಹೋರಾಟದ ಪರಿಷತ್ತಾಗಿ ರೂಪಿಸುವ ಆಶಯವಿದೆ. ಅದಕ್ಕೆ ನಿಮ್ಮ ಮತ, ನನ್ನ ಗೆಲವು, ನಿಮ್ಮ ಸಹಕಾರ ಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸಧಿ ಎಂ.ಸಿ.ಶಿವಾನಂದಸ್ವಾಮಿ ಮನವಿ ಮಾಡಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು. ಪರಿಷತ್ತಿಗೆ ಅಧ್ಯಕ್ಷನಾದರೆ, ಜಿಲ್ಲೆಯಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಇಚ್ಚೆಯಿದೆ. ಹೋಬಳಿ-ಗ್ರಾಮ ಮಟ್ಟಕ್ಕೆ ಸಾಹಿತ್ಯ ಸಮ್ಮೇಳನ ಕೊಂಡೊಯ್ಯವ ಮನಸ್ಸಿದೆ. ಕನ್ನಡವನ್ನು ಬದುಕಿನ ಭಾಷೆಯಾಗಿಸುವ ಉದ್ದೇಶವಿದೆ. ಇವುಗಳ ಅನುಷ್ಠಾನಕ್ಕೆ ಸ್ಥರ್ಧೆಯಲ್ಲಿ ಗೆಲುವು ಅಗತ್ಯವಾಗಿದ್ದು, ಎಲ್ಲರೂ ಬೆಂಬಲಿಸಿ ಎಂದರು. ಕನ್ನಡ ಸಾಹಿತ್ಯ ಪರಿಷತ್ತೂ ಸೇರಿದಂತೆ ವಿದ್ಯಾರ್ಥಿ ಪೆಡರೇಷನ್, ಯುನೈಟೆಡ್ ಪ್ಲಾಂಟೇಶನ್ ನೌಕರರ ಸಂಘ, ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್‌ನಲ್ಲಿ ಜವಾಬ್ದಾರಿಯುತ ಸ್ಥಾನ ನಿರ್ವಹಿಸಿದ ಅನುಭವ ಇರುವ ಶಿವಾನಂದಸ್ವಾಮಿ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಮರ್ಥರಿದ್ದಾರೆ.
ಹಾಗಾಗಿ ಅವರನ್ನು ಬೆಂಬಿಲಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಡೂರು ತಾಲೂಕು ಅಧ್ಯಕ್ಷ ರವಿ ಪ್ರಕಾಶ್ ಮನವಿ ಮಾಡಿದರು. ಸಾಹಿತಿ ರವೀಶ್ ಖ್ಯಾತನಬೀಡು ಮಾತನಾಡಿ, ಸಹಕಾರ ರಂಗ, ಪತ್ರಿಕಾ ಕ್ಷೇತ್ರ, ರಾಜಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸಿದ, ಸ್ಥಳೀಯ ಅಮೃತ್ ಮಹಲ್ ಉಳಿಸಿ ಹೋರಾಟ, ಭದ್ರಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ನೀರಾವರಿ ಮೀಸಲು ಬಗೆಗಿನ ಹೋರಾಟದಲ್ಲಿ ಸಕ್ರಿಯರಾಗಿದ್ದ, ಇಲ್ಲಿನ ನೆಲ, ಜಲ, ಜನರ ಭಾವನೆಗಳು ತಿಳಿದಿರುವ, ಕನ್ನಡ ಭಾಷೆ, ಸಾಹಿತ್ಯ ಕಟ್ಟುವ ಸಾಮರ್ಥ್ಯ ಹೊಂದಿರುವ ಶಿವಾನಂದಸ್ವಾಮಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಆರಿಸಿಸೋಣ ಎಂದರು.
ತಾಪಂ ಮಾಜಿ ಅಧ್ಯಕ್ಷ ಶಂಕರಲಿಂಗಪ್ಪ ಮಾತನಾಡಿ, ಶಿವಾನಂದಸ್ವಾಮಿ ಕನ್ನಡದ ಬಗ್ಗೆ ಕಳಕಳಿ ಹೊಂದಿದ್ದಾರೆ. ಸಾಹಿತ್ಯದ ಮನಸ್ಸುಗಳನ್ನು ಒಂದಾಗಿಸಲು ಪ್ರಯತ್ನ ನಡೆಸಿದ್ದಾರೆ. ಜಾತಿ, ಮತ, ಧರ್ಮದ ಲೇಪ ತೊರೆದು ಕಸಾಪ ಸದಸ್ಯರು ಶಿವಾನಂದಸ್ವಾಮಿ ಅವರಿಗೆ ಮತ ನೀಡಿ ಎಂದರು. ತಮ್ಮ ಸಂಘದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರ ಬೆಂಬಲ ಶಿವಾನಂದಸ್ವಾಮಿ ಅವರಿಗಿದೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹಾಗೂ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಈಶ್ವರಪ್ಪ ತಿಳಿಸಿದರು. ಕಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ , ಸಂಕಲ್ಪ ಫೌಂಡೇಶನ್‌ನ ರವಿಶ್ಯಾನುಭಾಗ್, ಪತ್ರಕರ್ತ ರಾಜೇಂದ್ರಕುಮಾರ್, ಎನ್. ರಾಜು, ಬುಕ್ಕಾಂಬು ಯ ಗುರುಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಡಿ.ಪಿ.ರಾಜಪ್ಪ, ಸಿದ್ದೇಗೌಡ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಯಶೋಧಮ್ಮ, ಸಾಹಿತಿ ಅಪ್ಪಾಜಿ ಮತ್ತಿತರರಿದ್ದರು.