Advertisement

ಅವಧಿ ಮುಗಿದ ಗ್ಲೂಕೋಸ್‌ ಪೊಟ್ಟಣ ವಿತರಣೆಗೆ ಆಕ್ರೋಶ

06:43 PM Apr 21, 2021 | Team Udayavani |

ಚಿಕ್ಕಮಗಳೂರು: ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಮೆಡಿಕಲ್‌ ಅಂಗಡಿಯಲ್ಲಿ ಅವಧಿ ಮುಗಿದ (9 ವರ್ಷ ಹಳೆಯ) ಗ್ಲೂಕೋಸ್‌ ಪೊಟ್ಟಣ ನೀಡಿದ್ದಾರೆಂದು ಗ್ರಾಹಕರೊಬ್ಬರು ಆರೋಪಿಸಿದ್ದಾರೆ.

Advertisement

ನಗರದ ನಿವಾಸಿ ಗುರು ಎಂಬುವವರ ಚಿಕ್ಕಪ್ಪ ಅನಾರೋಗ್ಯದಿಂದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ನರ್ಸ್‌ ಒಬ್ಬರು ಗುರು ಚಿಕ್ಕಪ್ಪ ಅವರಿಗೆ ಎಳನೀರು ಮತ್ತು ಗ್ಲೂಕೋಸ್‌ ನೀಡುವಂತೆ ತಿಳಿಸಿದ್ದು ಅದರಂತೆ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಗುರು ಚಿಕ್ಕಪ್ಪ ಗ್ಲೂಕೋಸ್‌ ಖರೀದಿಸಿದ್ದು, 26 ರೂ. ಬೆಲೆಯ ಗ್ಲೂಕೋಸ್‌ ಪೊಟ್ಟಣವನ್ನು 13 ರೂ.ಗೆ ಮೆಡಿಕಲ್‌ ಸ್ಟೋರ್‌ ನವರು ನೀಡಿದ್ದಾರೆ.

ಕಡಿಮೆ ಬೆಲೆಗೆ ಗ್ಲೂಕೋಸ್‌ ನೀಡಿದ್ದರಿಂದ ಅನುಮಾನಗೊಂಡ ಗುರು ಗ್ಲೂಕೋಸ್‌ ತಯಾರಿಕೆ ದಿನಾಂಕ, ಅವಧಿ, ಬೆಲೆ ನಮೂದಿಸಿದ ಸ್ಥಳ ಪರಿಶೀಲನೆ ಮಾಡಿದಾಗ ಲೇಬಲ್‌ ಅಂಟಿಸಿರುವುದು ಕಂಡು ಬಂದಿದೆ. ಇದನ್ನು ಖಚಿತ ಪಡೆಸಿಕೊಳ್ಳುವ ಉದ್ದೇಶದಿಂದ ಗುರು ಅವರು ಮತ್ತೋಂದು ಗ್ಲೂಕೋಸ್‌ ಪೊಟ್ಟಣ ಖರೀದಿಸಿದ್ದು, ಅದರ ಮೇಲೆ ಅಂಟಿಸಿದ್ದ ಲೇಬಲ್‌ ತಗೆದು ಪರಿಶೀಲಿಸಿದಾಗ ಅವ ಧಿ ಮುಗಿದ ಗ್ಲೂಕೋಸ್‌ ನೀಡಿರುವುದು ತಿಳಿದು ಬಂದಿದೆ.

2012ರಲ್ಲಿ ತಯಾರಾದ ಗ್ಲೂಕೋಸ್‌ ಪೊಟ್ಟಣದ ಮೇಲೆ 2021 ಏಪ್ರಿಲ್‌ ಎಂದು ಬರೆದಿರುವ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದು, 24 ತಿಂಗಳು ಅವ ಧಿಯ ಗ್ಲೂಕೋಸನ್ನು ಲೇಬಲ್‌ ಅಂಟಿಸಿ 9 ವರ್ಷಗಳ ಬಳಿಕವೂ ಮಾರಾಟ ಮಾಡುತ್ತಿರುವುದನ್ನು ಕಂಡು ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಸರ್ಕಾರ ತೆರೆದಿರುವ ಜನೌಷಧ ಕೇಂದ್ರಗಳಲ್ಲಿ ಅವ ಧಿ ಮುಗಿದ ಗ್ಲೂಕೋಸ್‌ಗೆ ಲೇಬಲ್‌ ಅಂಟಿಸಿ ಗ್ರಾಹಕರಿಗೆ ಮೋಸ ಮಾಡಿದರೆ, ಗ್ರಾಹಕರು ಯಾರನ್ನು ನಂಬಬೇಕು. ಗ್ರಾಹಕರಿಗೆ ಮೋಸ ಮಾಡುವ ಜನೌಷಧ ಕೇಂದ್ರದ ಮೇಲೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next